Premature Grey Hair Treatment: ಅಕಾಲಿಕ ಬಿಳಿ ಕೂದಲನ್ನು ಬುಡದಿಂದಲೂ ಕಪ್ಪಾಗಿಸುತ್ತೆ ಈ ಗಿಡಮೂಲಿಕೆಗಳು
ಪ್ರಸ್ತುತ ಬದಲಾದ ಜೀವನ ಶೈಲಿಯಲ್ಲಿ, ಅತಿ ಚಿಕ್ಕ ವಯಸ್ಸಿನಲ್ಲಿ ಎಂದರೆ 20 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿಯೇ ನೆರೆ ಕೂದಲು ಬರುವುದು ಸಾಮಾನ್ಯ ವಿಷಯವಾಗಿದೆ. ದೇಹದಲ್ಲಿ ಪೋಷಕಾಂಶಗಳ ಕೊರತೆ ಮತ್ತು ಕೆಟ್ಟ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ.
ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಪಡೆಯಲು ಕೆಲವು ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈಗಳನ್ನು ಬಳಕೆ ಮಾಡುತ್ತಾರೆ. ಆದರೆ, ಆಯುರ್ವೇದದ ಪ್ರಕಾರ, ಕೆಲವು ಗಿಡ ಮೂಲಿಕೆಗಳ ಸಹಾಯದಿಂದ ನೈಸರ್ಗಿಕ ರೀತಿಯಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಅಂತಹ ಗಿಡಮೂಲಿಕೆಗಳು ಯಾವುವು ಎಂದು ನೋಡುವುದಾದರೆ...
ನೆಲ್ಲಿಕಾಯಿಯು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು ಇದು ಕೂದಲು ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯಕವಾಗುವುದರ ಜೊತೆಗೆ ಇದು ಕೂದಲನ್ನು ಬಲಪಡಿಸುತ್ತದೆ. ಇದಕ್ಕಾಗಿ, ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮತ್ತು ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಕೂದಲಿಗೆ ಅನ್ವಯಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ.
ಅಡುಗೆ ಮನೆಯ ಪ್ರಮುಖ ಮಸಾಲೆ ಪದಾರ್ಘವಾಗಿರುವ ಕರಿ ಮೆಣಸು ಆಹಾರದ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ ಅಕಾಲಿಕ ಬಿಳಿ ಕೂದಲು ಕಪ್ಪಾಗಲೂ ಕೂಡ ಪ್ರಯೋಜನಕಾರಿ ಆಗಿದೆ. ನೀವು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಬಯಸಿದರೆ ಇದಕ್ಕಾಗಿ ಕರಿ ಮ್ನಸನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹೇರ್ ಮಾಸ್ಕ್ ಆಗಿ ಬಳಸಬಹುದು.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಭೃಂಗರಾಜ್ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹರಿಸಲು ಪ್ರಯೋಜನಕಾರಿಯಾದ ಅತ್ಯುತ್ತಮ ಆಯುರ್ವೇದ ಮೂಲಿಕೆಯಾಗಿದೆ. ಭೃಂಗರಾಜ್ ತೈಲ ಬಳಕೆಯಿಂದ ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯು ಬುಡದಿಂದ ನಿವಾರಣೆಯಾಗುತ್ತದೆ.
ಪ್ರೋಟೀನ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿರುವ ಮೆಂತ್ಯ ಬೀಜಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ನೀವು ಕೂದಲಿಗಾಗಿ ಬಳಸುವ ತೈಲದಲ್ಲಿ ಮೆಂತ್ಯೆ ಬೀಜಗಳನ್ನು ನೆನೆಸಿ ಆ ಎಣ್ಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.