ಟಿಕ್..‌ ಟಿಕ್.. ವಿಕ್ರಾಂತ್‌ ರೋಣ ಅಬ್ಬರಕ್ಕೆ‌ ಕೌಂಟ್‌ಡೌನ್‌, ಹೀಗಿದೆ ಸಿದ್ಧತೆ

Wed, 27 Jul 2022-6:02 pm,

ಎಲ್ಲೆಡೆ ಇದೀಗ ಚಾಲ್ತಿಯಲ್ಲಿರುವುದು ಒಂದೇ ಹೆಸರು ಅದು ವಿಕ್ರಾಂತ್‌ ರೋಣ.

ಬೆಳ್ಳಿ ಪರದೆ ಮೇಲೆ ವಿಕ್ರಾಂತ್‌ ರೋಣ ಅಬ್ಬರಿಸಲು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿವೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ.

ತಮ್ಮ ನೆಚ್ಚಿನ ನಟನ ಸಿನಿಮಾ ಸ್ವಾಗತಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. 

ಎಲ್ಲೆಲ್ಲೂ ಕಿಚ್ಚನ ಕಟೌಟ್‌ಗಳೇ ರಾರಾಜಿಸುತ್ತಿವೆ. ಚಿತ್ರಮಂದಿರಗಳ ಮುಂದೆ ಬ್ಯಾನರ್‌ಗಳು ಮಿಂಚುತ್ತಿವೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. 

ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸುದೀಪ್‌ ಅವರೇ ಡಬ್‌ ಮಾಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಸಿನಿಮಾ ನಾಳೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link