CSK vs MI ಪಂದ್ಯ ವೀಕ್ಷಿಸಲು ಬಂದಿದ್ದ ಜಾಸ್ಮಿನ್ ವಾಲಿಯಾ..ಬ್ರಿಟನ್‌ ಗಾಯಕಿಯೊಂದಿಗೆ ಮೊದಲಿನಿಂದಲೇ ಸಬಂಧ ಹೊಂದಿದ್ರಾ ಹಾರ್ದಿಕ್‌ ಪಾಂಡ್ಯ..?

Thu, 15 Aug 2024-8:55 am,

ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ಜುಲೈ 18 ರಂದು ತಮ್ಮ ವಿವಾಹದಿಂದ ಬೇರ್ಪಡುವುದಾಗಿ ಘೋಷಿಸಿದರು. ಈ ವರ್ಷದ ಆರಂಭದಲ್ಲಿ ನತಾಶಾ ಸ್ಟಾಂಕೋವಿಕ್ ತನ್ನ ಇನ್‌ಸ್ಟಾಗ್ರಾಮ್ ಪುಟದಿಂದ ಹಾರ್ದಿಕ್ ಪಾಂಡ್ಯ ಹೆಸರನ್ನು ತೆಗೆದುಹಾಕಿದ್ದರು. ಐಪಿಎಲ್ ಸರಣಿಯ ವೇಳೆಯೂ ಪಾಂಡ್ಯ ಅವರನ್ನು ಬೆಂಬಲಿಸಲು ನತಾಶ ಖುದ್ದು ಹಾಜರಾಗಿರಲಿಲ್ಲ.  

ವಿಚ್ಛೇದನದ ನಂತರ ಹಾರ್ದಿಕ್ ಪಾಂಡ್ಯ ಹೊಸ ಸಂಬಂಧದಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತದೆ. ಹಾರ್ದಿಕ್ ಪಾಂಡ್ಯ ಅವರು ಬ್ರಿಟಿಷ್ ಗಾಯಕ ಮತ್ತು ಟಿವಿ ನಟಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಗ್ರೀಸ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದ್ದು, ಇದಕ್ಕೆ ಸಂಬಂಧಿಸಿದ ಫೋಟೊಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿವೆ. ಇಬ್ಬರೂ ಒಂದೇ ಕಡೆಯಿಂದ ಪ್ರತ್ಯೇಕವಾಗಿ ಪೋಸ್ಟ್ ಮಾಡಿದ ಫೋಟೋಗಳು ಸಂಚಲನ ಮೂಡಿಸಿವೆ.  

ಇದರ ನಂತರ, ಇಬ್ಬರೂ ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲು ಆರಂಭಿಸಿದ್ದಾರೆ. ಹೀಗಿರುವಾಗ ಐಪಿಎಲ್ ಸರಣಿಯ ವೇಳೆ ಹಾರ್ದಿಕ್ ಪಾಂಡ್ಯ ಜಾಸ್ಮಿನ್ ವಾಲಿಯಾಳನ್ನು ಪ್ರೀತಿಸುತ್ತಿದ್ದ ಎನ್ನುವ ವಿಚಾರ ಇದೀಗ ಎಲ್ಲೆಡೆ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸಿಎಸ್‌ಕೆ-ಮುಂಬೈ ಪಂದ್ಯವನ್ನು ವೀಕ್ಷಿಸಲು ಜಾಸ್ಮಿನ್ ವಾಲಿಯಾ ಹೋಗಿದ್ದು, ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿ  

ಜಾಸ್ಮಿನ್ ವಾಲಿಯಾ ಫೋಟೋಗಳು ಮತ್ತು ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ಅದೂ ಅಲ್ಲದೆ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಟಿ20 ಸರಣಿಗಾಗಿ ಕೊಲಂಬೊಗೆ ತೆರಳಿದಾಗಲೂ ಜಾಸ್ಮಿನ್ ವಾಲಿಯಾ ಶ್ರೀಲಂಕಾದಲ್ಲೇ ಉಳಿದಿದ್ದರು. ಜುಲೈ 27 ರಂದು ಶ್ರೀಲಂಕಾ ಮತ್ತು ಭಾರತ ನಡುವಿನ ಟಿ20 ಸರಣಿ ಅಂದು ಜಾಸ್ಮಿನ್ ವಾಲಿಯಾ ಶ್ರೀಲಂಕಾದಲ್ಲಿ ಇದ್ದೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.  

ಆಗಸ್ಟ್ 4 ರಂದು ಶ್ರೀಲಂಕಾದಿಂದ ನೇರವಾಗಿ ಗ್ರೀಸ್‌ಗೆ ಪ್ರಯಾಣಿಸಿದ್ದೇನೆ ಎಂದು ಜಾಸ್ಮಿನ್ ವಾಲಿಯಾ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಜಾಸ್ಮಿನ್ ವಾಲಿಯಾ ಜತೆ ಹಾರ್ದಿಕ್ ಪಾಂಡ್ಯ ಪ್ರಯಾಣಿಸಿರಬಹುದು ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಸದ್ಯ ಗ್ರೀಸ್ ನಲ್ಲಿ ರಜೆಯಲ್ಲಿದ್ದಾರೆ.  

ಇದರೊಂದಿಗೆ ಹಾರ್ದಿಕ್ ಪಾಂಡ್ಯ ನತಾಶಾ ಜೊತೆ ಬ್ರೇಕ್ ಅಪ್ ಆಗುವ ಮುನ್ನ ಜಾಸ್ಮಿನ್ ವಾಲಿಯಾಳನ್ನು ಪ್ರೀತಿಸುತ್ತಿದ್ದರು ಎಂಬ ಚರ್ಚೆಗಳು ಶುರುವಾಗಿದೆ. ಈ ಪ್ರೇಮ ಪ್ರಕರಣದಿಂದಲೇ ಹಾರ್ದಿಕ್ ಪಾಂಡ್ಯ ನತಾಶರೊಂದಿಗಿನ ಮದುವೆಯಿಂದ ಹೊರ ಬಂದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link