ನವರಾತ್ರಿ 2022 : ನಾರಿಯರ ಬೆನ್ನಿನ ಮೇಲೆ ಮೂಡಿದ ಪಿಎಂ ಮೋದಿ
ನವರಾತ್ರಿ, ದುರ್ಗಾದೇವಿಯನ್ನು ಪೂಜಿಸುವ ಒಂಬತ್ತು ದಿನಗಳ ಉತ್ಸವ ಪ್ರಾರಂಭವಾಗಿದೆ. 9 ದಿನಗಳ ಕಾಲ ನವರಾತ್ರಿ ಉತ್ಸವವನ್ನು ದೇಶದ ವಿವಿಧ ಭಾಗಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಇದರ ಮಧ್ಯೆ, ಸೂರತ್‌ನ ಮಹಿಳೆಯರು ತಮ್ಮ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕಂಡು ಗಮನ ಸೆಳೆದಿದ್ದಾರೆ.
ಚಂದ್ರಯಾನ-2, ಪ್ರಧಾನಿ ಮೋದಿ ಮತ್ತು ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ನಡುವಿನ ಸಭೆಯವರೆಗೆ, ಭಾರತ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರಸ್ತುತ ಘಟನೆಗಳನ್ನು ಪ್ರತಿಬಿಂಬಿಸುವ ಟ್ಯಾಟೂಗಳನ್ನು ಮಹಿಳೆಯರು ಹಾಕಿಸಿಕೊಳ್ಳುತ್ತಿದ್ದಾರೆ.
ಈ ವರ್ಷ ನವರಾತ್ರಿಯನ್ನು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 7 ರವರೆಗೆ ಆಚರಿಸಲಾಗುತ್ತಿದೆ. ನವರಾತ್ರಿ ಹಬ್ಬದ ಮೊದಲ ದಿನದಂದು ಪ್ರಧಾನಿ ಮೋದಿ ಸೂರತ್‌ಗೆ ಭೇಟಿ ನೀಡುವ ಮುನ್ನ ಗುಜರಾತ್‌ನಲ್ಲಿ ಮಹಿಳೆಯರು ತಮ್ಮ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.