ಐಎಎಸ್ ಕನಸು ಕಂಡಿದ್ದ ಈ ವ್ಯಕ್ತಿ ಇದೀಗ ಭಾರತೀಯ ಸಿನಿ ಜಗತ್ತಿನ ಟಾಪ್ ಸಂಗೀತ ನಿರ್ದೇಶಕ..! ಯಾರದು..?

Sat, 15 Jun 2024-10:03 pm,

ಕಳೆದ ವರ್ಷ ತೆರೆಕಂಡ ಬ್ರಹ್ಮಾಸ್ತ್ರ ಚಿತ್ರಕ್ಕೆ ಈ ಸಂಗೀತ ನಿರ್ದೇಶಕ ಸಂಗೀತ ನೀಡಿದ್ದಾರೆ. ಸಂಗೀತ ನಿರ್ದೇಶಕರಾಗಲು ಪ್ರೀತಮ್‌ ಕಷ್ಟ ಪಟ್ಟ ಅಷ್ಟಿಷ್ಟಲ್ಲ.. ಇಂದು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.  

ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಪೋಷಕರ ಪ್ರೋತ್ಸಾಹ ಬಹು ಮುಖ್ಯ. ಆದರೆ, ಪ್ರೀತಮ್ ಚಕ್ರವರ್ತಿ ಅದೃಷ್ಟಶಾಲಿಯಾಗಿರಲಿಲ್ಲ. ಪ್ರೀತಮ್ ಸಂಗೀತ ನಿರ್ದೇಶಕನಾಗುವುದು ಪೋಷಕರಿಗೆ ಇಷ್ಟವಿಲ್ಲ. ನಾನು ಚಿಕ್ಕವನಿದ್ದಾಗ ಅಪ್ಪ ಮ್ಯೂಸಿಕ್‌ ಬೇಡ ಎಂದಿದ್ದರು. ಇಂಜಿನಿಯರಿಂಗ್ ಮಾಡುವುದಾಗಿ ಸುಳ್ಳು ಹೇಳಿ ಮ್ಯೂಸಿಕ್ ಕೋರ್ಸ್ ಸೇರಿದ್ದರು. ಸ್ವತಃ ಈ ವಿಷಯವನ್ನು ಪ್ರೀತಮ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.   

ಪ್ರೀತಮ್ ವೃತ್ತಿಜೀವನದಲ್ಲಿ ಮತ್ತೊಂದು ಕುತೂಹಲಕಾರಿ ಟ್ವಿಸ್ಟ್ ಇದೆ. ಶಾಲಾ ದಿನಗಳಲ್ಲಿ ಅವರು ಐಎಎಸ್ ಆಗಬೇಕೆಂಬ ಕನಸು ಕಂಡಿದ್ದರಂತೆ. ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ, ಬ್ಯಾಂಕ್ ಉದ್ಯೋಗಿಯಾಗಿ ಜೀವನ ಸಾಗಿಸಲು ಬಯಸಿದ್ದರಂತೆ. ಆದರೆ, ಅದೃಷ್ಟ ಪ್ರೀತಮ್ ಅವರನ್ನು ದೊಡ್ಡ ಸಂಗೀತ ನಿರ್ದೇಶಕನನ್ನಾಗಿ ಮಾಡಿತು.  

ಪ್ರೀತಮ್ ಬಾಲ್ಯದಿಂದಲೂ ಗಿಟಾರ್ ನುಡಿಸುತ್ತಿದ್ದರು. ಪ್ರೀತಮ್ ಗೆ ಅವರ ತಂದೆ ಸಂಗೀತ ತರಬೇತಿಯನ್ನೂ ನೀಡಿದ್ದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಪದವಿ ಮಾಡುತ್ತಿರುವಾಗ, ಪ್ರೀತಮ್ ಜೋತುಗೃಹರ್ ಪಾಖಿ ಎಂಬ ಸಂಗೀತ ತಂಡವನ್ನು ಸೇರಿಕೊಂಡರು. ಎಫ್‌ಟಿಐಐ ಕೋರ್ಸ್‌ಗೆ ಸೇರಲು ಅವರು ತಮ್ಮ ಪದವಿಯನ್ನು ತ್ಯಜಿಸಿದರು. ಪೂರ್ಣ ಸಮಯದ ಸಂಗೀತ ಸಂಯೋಜಕನಾಗಲು ಪ್ರೀತಮ್ ಪೋಷಕರು ಒಪ್ಪಲಿಲ್ಲ.   

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಪ್ರೀತಮ್ ಕೆಲವು ಜಾಹೀರಾತುಗಳಿಗೆ ಸಂಗೀತವನ್ನು ನೀಡುತ್ತಿದ್ದರು. ಹಾಗೆ ಜಾಹೀರಾತುಗಳನ್ನು ಮಾಡುವಾಗ ಅವಕಾಶಗಳಿಗಾಗಿ ಕಾಯುತ್ತಿದ್ದರು. ಅವರಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದು ‘ತೇರೆ ಲಿಯೆ’. ಹಾಡುಗಳು ಚೆನ್ನಾಗಿದ್ದರೂ ಸಿನಿಮಾ ಪ್ಲೇ ಆಗಲಿಲ್ಲ.   

ಆದರೆ, ನಂತರ ಬಂದ ‘ಧೂಮ್’ ಸಿನಿಮಾ ಚಾರ್ಟ್ ಬಸ್ಟರ್ ಆಯಿತು. ಚಿತ್ರದ ಟೈಟಲ್ ಟ್ರ್ಯಾಕ್ ಇಂದಿಗೂ ಜನಮನದಲ್ಲಿದೆ. ಇದು ಅಮೆರಿಕ, ಬ್ರಿಟನ್ ಮತ್ತು ಪೂರ್ವ ಏಷ್ಯಾದಲ್ಲಿ ಬಹಳ ಜನಪ್ರಿಯವಾಗಿದೆ. ಅಂದಿನಿಂದ ಪ್ರೀತಮ್‌ಗೆ ಡಿಮ್ಯಾಂಡ್‌ ಸೃಷ್ಟಿಯಾಯಿತು..  

23 ವರ್ಷಗಳ ವೃತ್ತಿಜೀವನದಲ್ಲಿ ಪ್ರೀತಮ್‌ ಗ್ಯಾಂಗ್‌ಸ್ಟರ್, ಜನ್ನತ್, ಕಿಸ್ಮತ್ ಕನೆಕ್ಷನ್, ಜಬ್ ವಿ ಮೆಟ್, ರೇಸ್, ಲವ್ ಆಜ್ ಕಲ್, ಅಜಬ್ ಪ್ರೇಮ್‌ಕಿ ಗಜಬ್ ಕಹಾನಿ, ಯೇ ದಿಲ್ ಹೈ ಮುಷ್ಕಿಲ್, ಕಾಕ್‌ಟೈಲ್, ಬ್ರಹ್ಮಾಸ್ತ್ರ ಮುಂತಾದ ಸೇರಿದಂತೆ 100 ಕ್ಕೂ ಹೆಚ್ಚು ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.   

ಪ್ರೀತಮ್ ವಿರುದ್ಧವೂ ಕೆಲವು ಟೀಕೆಗಳಿವೆ, ಅವರು ಬೇರೆ ಭಾಷೆಯ ಹಾಡುಗಳನ್ನು ನಕಲು ಮಾಡಿದ್ದಾರೆ ಎಂಬ ಆರೋಪವಿದೆ.  ಇಂಡಸ್ಟ್ರಿಯ ವರದಿಗಳ ಪ್ರಕಾರ.. ಒಂದೇ ಚಿತ್ರಕ್ಕೆ ಪ್ರೀತಮ್ 5 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link