ಟೀಂ ಇಂಡಿಯಾ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತೇ? ಕೋಚ್ ಮಗಳನ್ನೇ ಕದ್ದುಮುಚ್ಚಿ ಪ್ರೀತಿಸಿ ಮದುವೆಯಾದ ‘ಚಿನ್ನ ಥಾಲ’
ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ರೈನಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಸುರೇಶ್ ರೈನಾ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತರಾದರು.
ನಾವಿಂದು ಈ ವರದಿಯಲ್ಲಿ ಸುರೇಶ್ ರೈನಾ ಅವರ ಪತ್ನಿ ಯಾರು? ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸುರೇಶ್ ರೈನಾ ಪತ್ನಿಯ ಹೆಸರು ಪ್ರಿಯಾಂಕಾ ಚೌಧರಿ. ಇವರು ರೈನಾ ಅವರ ಮೊದಲ ಕೋಚ್ ಆಗಿದ್ದ ತೇಜ್ಪಾಲ್ ಚೌಧರಿಯ ಮಗಳು. ಮುರಾದ್’ನಗರದಲ್ಲಿ ಜನಿಸಿದ ತೇಜ್‌ಪಾಲ್ ಗಾಜಿಯಾಬಾದ್’ನಲ್ಲಿ ಅನೇಕ ಆಟಗಾರರಿಗೆ ತರಬೇತಿ ನೀಡಿತ್ತಿದ್ದರು. ಸುರೇಶ್ ಮತ್ತು ಪ್ರಿಯಾಂಕಾ ಮುರಾದನಗರದಲ್ಲಿ ನೆರೆಹೊರೆಯವರಾಗಿದ್ದು, ಅವರಿಬ್ಬರ ಕುಟುಂಬಗಳು ಪರಸ್ಪರ ಚೆನ್ನಾಗಿ ತಿಳಿದಿದ್ದವು.
ಬಾಲ್ಯದಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದ ಈ ಇಬ್ಬರು ಬೆಳೆದ ನಂತರ ಬೇರೆಯಾದರು. ರೈನಾ ಟೀಮ್ ಇಂಡಿಯಾ ಪರ ಆಡಲು ಆರಂಭಿಸಿದಾಗ, ಪ್ರಿಯಾಂಕಾ ನೆದರ್ಲೆಂಡ್ಸ್‌ನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಇಬ್ಬರ ನಡುವೆ ಮತ್ತೆ ಸಂಪರ್ಕ ಏರ್ಪಟ್ಟಿತ್ತು.
ಆ ಬಳಿಕ ಪ್ರೀತಿಯಲ್ಲಿ ಬಿದ್ದ ಇಬ್ಬರೂ ವಿವಾಹವಾಗಲು ನಿರ್ಧರಿಸಿದರು, ಮನೆಯವರ ಒಪ್ಪಿಗೆ ಪಡೆದು ಸುರೇಶ್ ರೈನಾ ಮತ್ತು ಪ್ರಿಯಾಂಕ ಮದುವೆಯಾಗಿದ್ದಾರೆ. ಈ ಮುದ್ದಾದ ಜೋಡಿಗೆ ಇಬ್ಬರು ಮಕ್ಕಳಿದ್ದು ಸುಖೀಸಂಸಾರ ನಡೆಸುತ್ತಿದ್ದಾರೆ.