Priyanka Chincholi: ವಿದೇಶದಿಂದ ಮರಳಿದ ಮೇಲೆ ಗೃಹಪ್ರವೇಶದ ಸಂಭ್ರಮಾಚರಣೆಯಲ್ಲಿ ಕಿರುತೆರೆಯ ಗುಳಿಕೆನ್ನೆ ನಟಿ!
ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ತಮ್ಮ ಪತಿ ರಾಕೇಶ್ ಜೊತೆಗೆ ಲಂಡನ್‌ಗೆ ಹಾರಿದ್ದವರು, ಇದೀಗ ಈ ಜೋಡಿ ಬೆಂಗಳೂರಿಗೆ ಮರಳಿ ಹೊಸ ಮನೆಯನ್ನು ಖರೀದಿಸಿದ್ದಾರೆ.
ಸೀರಿಯಲ್ ನಟಿ ಪ್ರಿಯಾಂಕಾ ಚಿಂಚೋಳಿ ಸದ್ಯ ಗೃಹಪ್ರವೇಶದ ಸಡಗರದಲ್ಲಿದ್ದು, ತಮ್ಮ ಕುಟುಂಬದ ಸುಂದರ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚಿಂಚೋಳಿ ತಮ್ಮ ಮನೆಯ ಮುಂದೆ ʻRP ONEʼ ಎಂದು ಹೆಸರು ಹಾಕಿರುವುದರ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿರುವ ಪೋಸ್ಟ್ ಕ್ಯಾಪ್ಶನ್‌ನಲ್ಲಿ ಸಾಧಿಸುವುದು ಇನ್ನೂ ಇದೆ ಎಂದು ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಚಿಂಚೋಳಿ ಅವರು ಎರಡು ವರ್ಷಗಳ ಹಿಂದೆ ರಾಕೇಶ್ ಎಂಬುವರನ್ನು ಮದುವೆಯಾಗಿದ್ದು, ಮನಸಾರೆ ಸೀರಿಯಲ್ ಮುಗಿದ ಬಳಿಕ ವಿದೇಶಕ್ಕೆ ಗಂಡನ ಜೊತೆಗೆ ಹೋಗಿದ್ದ ನಟಿ, ಇದೀಗ ಬೆಂಗಳೂರಿಗೆ ವಾಪಸ್ ಆಗಿ ಹೊಸ ಮನೆಗೆ ಹೆಜ್ಜೆಹಾಕಿದ್ದಾರೆ.
ಧಾರವಾಹಿ ನಟಿ ಪ್ರಿಯಾಂಕಾ ಚಿಂಚೋಳಿ ಪೌರಾಣಿಕ ಪಾತ್ರಗಳಿಂದ ಗುರುತಿಸಿಕೊಂಡಿರು, ಈಗಲೂ ಈಕೆಗೆ ಪೌರಾಣಿಕ ಪಾತ್ರಗಳೆಂದರೆ ಬಹಳ ಇಷ್ಟವಂತೆ. ಆದರೆ ವೆಟರ್ನರಿ ಡಾಕ್ಟರ್ ಆಗುವ ಕನಸು ಕಂಡಿದ್ದ ಗುಳಿಕೆನ್ನೆ ರಾಣಿ, ಅದು ಹೇಗೋ ನಟನೆಯ ಆಯ್ಕೆ ಮಾಡಿಕೊಂಡರು.
ನಟಿ ಪ್ರಿಯಾಂಕಾ ಚಿಂಚೋಳಿ ಮೂಲತಃ ಗುಲ್ಬರ್ಗಾದವರಾಗಿದ್ದು, ಖಾಸಗಿ ವಾಹಿನಿಯಲ್ಲಿ ನಿರೂಪಣೆ ಮಾಡಲು ಬೆಂಗಳೂರಿಗೆ ಬಂದರು. ನಂತರ ಮಾಡೆಲಿಂಗ್ ಲೋಕಕ್ಕೆ ಹೆಜ್ಜೆ ಹಾಕಿ 2011ರಲ್ಲಿ ಮಿಸ್ ಗುಲ್ಬರ್ಗಾ ಸ್ಪರ್ಧೆಯಲ್ಲಿ ಗೆದ್ದು, ಬಳಿಕ 2013ರಲ್ಲಿ ಮಿಸ್ ವಿವೆಲ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು.
ಪ್ರಿಯಾಂಕಾ ಚಿಂಚೋಳಿ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಪಾರ್ವತಿ ದೇವಿಯಾಗಿ, ನಂತರ ಜೈ ಹನುಮಾನ್ ಧಾರಾವಾಹಿಯಲ್ಲಿ ಅಂಜನಾ ದೇವಿಯಾಗಿ ಪೌರಾಣಿಕ ಕಥೆಗಳಲ್ಲಿ ಬಣ್ಣಹಚ್ಚುವುದರ ಜೊತೆಗೆ ಮನಸಾರೆ ಹಾಗೂ ಮನಸೆಲ್ಲಾ ನೀನೆ ಸೀರಿಯಲ್‌ಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ಕನ್ನಡದ ನಟಿ ಪ್ರಿಯಾಂಕಾ ಚಿಂಚೋಳಿ ಕಿರುತೆರೆಯಲ್ಲಿ ಮಾತ್ರವಲ್ಲದೇ ಸಮಯದ ಗೊಂಬೆ, ಜೀವನದ ಜೋಕಾಲಿ, ಕೌಟಿಲ್ಯ, ರೆಮೋ ಹಾಗೂ ಅಲೆವ ಮೋಡ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ.