ಬುಧ ಸಂಚಾರದಿಂದ ಭದ್ರ ರಾಜಯೋಗ, 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಧನಾಗಮನದಿಂದ ಸಂಪತ್ತು ವೃದ್ಧಿ

Wed, 11 Sep 2024-6:50 am,

ಸದ್ಯ ಸಿಂಹ ರಾಶಿಯಲ್ಲಿ ಉಪಸ್ಥಿತನಾಗಿರುವ ಗ್ರಹಗಳ ರಾಜಕುಮಾರ, ತರ್ಕ, ಬುದ್ಧಿ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 9.30ರ ಸುಮಾರಿಗೆ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. 

ತನ್ನದೇ ರಾಶಿಯಾದ ಕನ್ಯಾ ರಾಶಿಯಲ್ಲಿ ಬುಧನ ಪ್ರವೇಶದಿಂದ ಭದ್ರ ರಾಜಯೋಗ ಹಾಗೂ ಇದೇ ರಾಶಿಯಲ್ಲಿ ಸೂರ್ಯ-ಬುಧರ ಯುತಿಯಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತದೆ. 

ಕನ್ಯಾ ರಾಶಿಯಲ್ಲಿ ಬುಧನಿಂದ ನಿರ್ಮಾಣವಾಗಲಿರುವ ಭದ್ರ ರಾಜಯೋಗ ಹಾಗೂ ಬುಧಾದಿತ್ಯ ರಾಜಯೋಗಗಳಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯೋದಯವಾಗಲಿದ್ದು, ಅವರ ಎಲ್ಲಾ ಕನಸುಗಳು ನನಸಾಗಲಿವೆ ಎನ್ನಲಾಗುತ್ತಿದೆ. 

ಭದ್ರ ರಾಜಯೋಗದ ಪ್ರಭಾವದಿಂದ ಈ ರಾಶಿಯ ಜನರು ವೃತ್ತಿಯಲ್ಲಿ ಅಘಾದ ಕೀರ್ತಿ, ಯಶಸ್ಸನ್ನು ಸಂಪಾದಿಸುತ್ತಾರೆ. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ನಿವಾರಣೆಯಾಗಲಿದೆ. 

ಬುಧ ರಾಶಿ ಪರಿವರ್ತನೆಯಿಂದ ರೂಪುಗೊಳ್ಳಲಿರುವ ಶುಭ ಯೋಗಗಳ ಪರಿಣಾಮವಾಗಿ ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಪ್ರತಿಷ್ಠೆ ಹೆಚ್ಚಾಗಿ, ಪ್ರಮೋಷನ್ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಹೊಸ ವಾಹನ, ಮನೆ ಖರೀದಿ ಭಾಗ್ಯವನ್ನೂ ಪಡೆಯಬಹುದು

ಸ್ವ ರಾಶಿಯಲ್ಲಿ ಬುಧನ ಪ್ರವೇಶವು ಈ ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ವೇಳೆ, ವೃತ್ತಿ-ವ್ಯವಹಾರದಲ್ಲಿ ಹೊಸ ಉತ್ತುಂಗವನ್ನು ಏರುವರು. ಆರೋಗ್ಯ ಸುಧಾರಿಸಿ ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದು. 

ಭದ್ರ ರಾಜಯೋಗದ ಪ್ರಭಾವದಿಂದ ಕಳೆದೊಂದು ವರ್ಷದಿಂದ ನಿಮ್ಮ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಮುಕ್ತಿ ಹೊಂದುವಿರಿ. ವೃತ್ತಿ ಜೀವನದಲ್ಲಿ ಯಶಸ್ಸು, ಕೀರ್ತಿ ಲಭಿಸಲಿದೆ. ಆರ್ಥಿಕ ಮೂಲಗಳು ಹೆಚ್ಚಾಗಲಿವೆ. 

ಶುಭ ರಾಜಯೋಗಗಳ ಪರಿಣಾಮವಾಗಿ ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಇದನ್ನು ಸದುಪಯೋಗಪಡಿಸಿಕೊಂಡರೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. ವೈಯಕ್ತಿಕ ಬದುಕಿನಲ್ಲೂ ಧನಾತ್ಮಕತೆ ತುಂಬಿರಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link