ಐಶ್ವರ್ಯ-ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗೆ ಸಿಕ್ಕೇಬಿಡ್ತು ಒಂದಲ್ಲಾ..ಎರಡಲ್ಲಾ..ಐದು ಪುರಾವೆಗಳು! ಏನದು ಗೊತ್ತಾ?
Aishwarya Rai: ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಚೇದನದ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಇಬ್ಬರೂ ಮೌನ ವಹಿಸಿದ್ದಾರೆ.
17 ವರ್ಷಗಳ ದಾಂಪತ್ಯದ ನಂತರ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪ್ರತ್ಯೇಕತೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಂಪತಿಗಳು ಶೀಘ್ರದಲ್ಲೇ ವಿಚ್ಛೇದನ ಪಡೆಯುತ್ತಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯಳೊಂದಿಗೆ ಮಾತ್ರ ಹೋಗುತ್ತಿದ್ದಾರೆ. ದಂಪತಿಗಳು ಜೊತೆಯಾಗಿ ಕಾಣಿಸಿಕೊಳ್ಳದೇ ಇರುವುದು ವಿಚ್ಚೇದನ ವದಂತಿಳಿಗೆ ಪುಷ್ಠಿ ನೀಡಿದೆ.
ಎರಡನೆಯ ಪುರಾವೆ ಏನೆಂದರೆ, ಈ ಹಿಂದೆ ಹಲವು ಬಾರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದರು ಮತ್ತು ದಂಪತಿಗಳು ಪರಸ್ಪರ ಸಮಯ ಕಳೆಯುತ್ತಿದ್ದರು, ಆದರೆ ಈ ನಡುವೆ ಸಾಕಷ್ಟು ಸಮಯದಿಂದ ದಂಪತಿ ಒಟ್ಟಿಗೆ ಕಾಣಿಸಿಕೊಳ್ಳದೆ ಇರುವ ಕಾರಣ ಜನರು ಈ ಜೋಡಿಯ ನಡೆಯನ್ನು ಅನುಮಾನಿಸುತ್ತಿದ್ದಾರೆ.
ಇನ್ನೂ, ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ನಟಿ ತಮ್ಮ ಮಗಳನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ, ಇದರ ಕಾರಣದಿಂದಾಗಿ ಈ ಜೋಡಿ ವಿಚ್ಛೇದನ ಪಡೆಯುವುದು ಫಿಕ್ಸ್ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ.
ಅಂಬಾನಿ ಮದುವೆಗೂ ಸಹ ತಾಯಿ ಮಗಳು ಪ್ರತ್ಯೇಕವಾಗಿ ಬಂದಿದ್ದರು, ಒಂದೆಡೆ ಅಭಿಷೇಕ್ ಬಚ್ಚನ್ ತಮ್ಮ ಕುಟಂಬದೊಂದಿಗೆ ಫೋಟೋಗೆ ಪೋಸ್ ನೀಡಿದ್ದರೆ, ಇನ್ನೊಂದೆಡೆ ಐಶ್ವರ್ಯ ಹಾಗೂ ಆರಾಧ್ಯ ಫೋಟೋಗೆ ಪೋಸ್ ಕೊಟ್ಟಿದ್ದರು.
ಇದಷ್ಟೆ ಅಲ್ಲ, ಅಭಿಷೇಕ್ ಬಚ್ಚನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ವಿಚ್ಚೇದನ ವದಂತಿ ಪೋಸ್ಟ್‌ಗೆ ಲೈಕ್ ಮಾಡು ಈ ವಿಚ್ಚೇದನ ವದಂಇ ಸುದ್ದಿಗೆ ಪುಷ್ಠಿ ನೀಡಿದ್ದರು.