ಮಧುಮೇಹ ಇದ್ದವರು ಈ ಎಲೆ ಸಿಕ್ಕರೆ ಬಿಡಲೇಬೇಡಿ! ಒಂದು ಬಾರಿ ರಸ ಕುಡಿದರೆ ಮತ್ತೆಂದೂ ಬ್ಲಡ್ ಶುಗರ್ ಹೆಚ್ಚಾಗದಂತೆ ಕಾಪಾಡುತ್ತೆ!

Wed, 10 Apr 2024-9:51 pm,
Neem Leaves Control Diabetes

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಹೊರತು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಈ ರೋಗವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದು, ಭಾರತದಲ್ಲಿ ಕೋಟಿಗಟ್ಟಲೆ ಜನರು ಇದಕ್ಕೆ ಬಲಿಯಾಗಿದ್ದಾರೆ.

Neem Leaves Control Diabetes

ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರತಿದಿನ ಟೆಸ್ಟ್ ಮಾಡುತ್ತಲಿರಬೇಕು. ಅಂದಹಾಗೆ ನಾವಿಂದು ಕೆಲ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವು ಮಧುಮೇಹವನ್ನು ನಿಯಂತ್ರಿಸಲು ಪರಿಣಾಮಕಾರಿ ಆಯುರ್ವೇದ ಪರಿಹಾರಗಳಾಗಿವೆ.

Neem Leaves Control Diabetes

ಯುಪಿಯ ಅಲಿಗಢ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಸರೋಜ್ ಗೌತಮ್ ಅವರ ಪ್ರಕಾರ, ಬೇವಿನ ಎಲೆಗಳನ್ನು ಮಧುಮೇಹ ರೋಗಿಗಳಿಗೆ ವರದಾನ ಎಂಬಂತೆ ಪರಿಗಣಿಸಲಾಗಿದೆ. ಈ ಎಲೆಗಳನ್ನು ಸರಿಯಾಗಿ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು.

ಬೇವಿನ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಆಯುರ್ವೇದದಲ್ಲಿ ಬೇವಿನ ಎಲೆಗಳನ್ನು ಶತಮಾನಗಳಿಂದಲೂ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಬೇವಿನ ಎಲೆಗಳು ಕಹಿ ರಸವನ್ನು ಹೊಂದಿರುತ್ತವೆ.

ಆಯುರ್ವೇದ ವೈದ್ಯರ ಪ್ರಕಾರ, ನಮ್ಮ ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುವ ಫ್ಲೇವನಾಯ್ಡ್ಗಳು ಮತ್ತು ಇತರ ಸಂಯುಕ್ತಗಳು ಬೇವಿನ ಎಲೆಗಳಲ್ಲಿ ಕಂಡುಬರುತ್ತವೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸುಲಭವಾಗುತ್ತದೆ.

ಮಧುಮೇಹಿಗಳು 5-6 ಬೇವಿನ ಎಲೆಗಳನ್ನು ಜಗಿದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಅಥವಾ ಅದರ ರಸವನ್ನು ಸಹ ಕುಡಿಯಬಹುದು. ಹೀಗೆ ಮಾಡಿದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ.

ಬೇವಿನ ಎಲೆಗಳು ಮಧುಮೇಹ ಮತ್ತು ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ. ಆದರೆ ಕೆಲವರು ಬೇವಿನ ಎಲೆಗಳನ್ನು ತಿನ್ನಬಾರದು. ಮುಖ್ಯವಾಗಿ ದೈಹಿಕವಾಗಿ ದುರ್ಬಲರು, ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು, ವೃದ್ಧರು ಮತ್ತು ಚಿಕ್ಕ ಮಕ್ಕಳು ಬೇವಿನ ಸೊಪ್ಪನ್ನು ತಿನ್ನಬಾರದು. ಇದು ಅವರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link