ಮನೆಯ ಡೈನಿಂಗ್ ಟೇಬಲ್ ಈ ದಿಕ್ಕಿನಲ್ಲಿದ್ದರೆ ವೃದ್ದಿಯಾಗುವುದು ಸಿರಿ ಸಂಪತ್ತು ! ಸಾಲಬಾಧೆ ಕಾಡುವುದೇ ಇಲ್ಲ !ಮನೆಯಲ್ಲಿಯೇ ವಾಸವಿರುತ್ತಾಳೆ ಧನಲಕ್ಷ್ಮೀ !

Tue, 17 Sep 2024-5:40 pm,

ವಾಸ್ತುವಿನಲ್ಲಿ ಮನೆಯ ಅಭಿವೃದ್ದಿಯಾಗಬೇಕಾದರೆ ಡೈನಿಂಗ್ ಟೇಬಲ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಹೇಳಲಾಗಿದೆ. ಈ ದಿಕ್ಕಿನಲ್ಲಿ ಡೈನಿಂಗ್ ಟೇಬಲ್ ಇಟ್ಟರೆ ಸಿರಿ ಸಂಪತ್ತು ಹೆಚ್ಚುತ್ತದೆಯಂತೆ.  

ವಾಸ್ತು ಪ್ರಕಾರ ಡೈನಿಂಗ್ ಟೇಬಲ್ ಅನ್ನು ಅಡುಗೆ ಮನೆಯ ಹತ್ತಿರವೇ ಇಡಬೇಕು. ಇದು ಶುಭ ಮತ್ತು ಲಾಭದಾಯಕವಾಗಿರುತ್ತದೆ.ಡೈನಿಂಗ್ ಟೇಬಲ್ ಅನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಲೇ ಬಾರದು.

ಡೈನಿಂಗ್ ಟೇಬಲ್ ಅನ್ನು ದಕ್ಷಿಣ ಮತ್ತು ನೈಋತ್ಯ ದಿಕ್ಕಿಗೆ ಇಡಲೇಬಾರದು.ಇದು ಜೀವನದಲ್ಲಿ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.ಮನೆಯಲ್ಲಿ ಕಲಹ,ಜಗಳ ಹೆಚ್ಚುತ್ತಲೇ ಇರುತ್ತದೆ.   

ಡೈನಿಂಗ್ ಟೇಬಲ್ ಅನ್ನು ಮನೆಯ ಪಶ್ಚಿಮ ಅಥವಾ ಪೂರ್ವ ದಿಕ್ಕಿಗೆ ಇಡಬಹುದು.ಡೈನಿಂಗ್ ಟೇಬಲ್ ಇಡಲು ಇದುವೇ ಸರಿಯಾದ ದಿಕ್ಕು.     

ಇನ್ನು ವಾಸ್ತು ಪ್ರಕಾರ ಡೈನಿಂಗ್ ಟೇಬಲ್ ಗೋಲಾಕಾರ ಅಥವಾ ಅಂಡಾಕಾರದಲ್ಲಿ ಇರಬೇಕು.ಇಂಥ ಆಕಾರದ ಡೈನಿಂಗ್ ಟೇಬಲ್ ಇದ್ದರೆ ಐಶ್ವರ್ಯ ಹರಿದು ಬರುತ್ತದೆ ಎನ್ನಲಾಗುತ್ತದೆ. 

ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link