PPF ಖಾತೆಯಲ್ಲಿ ಬದಲಾಗಲಿದೆ ಮೂರು ಪ್ರಮುಖ ನಿಯಮ: ಅಕ್ಟೋಬರ್ 01ರಿಂದ ಹೊಸ ರೂಲ್ಸ್ ಜಾರಿ
ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಧಿಕ ಬಡ್ಡಿಯೊಂದಿಗೆ ಖಚಿತ ಆದಾಯವನ್ನು ಒದಗಿಸುವ ಸರ್ಕಾರದ ಯೋಜನೆಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳಲ್ಲಿ ಬದಲಾವಣೆಗೆ ಸಂಬಂದಿಸಿದಂತೆ ಸುತ್ತೋಲೆ ಹೊರಡಿಸಿದ್ದು, ಇದರನ್ವಯ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY), ನಂತಹ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಬದಲಾಯಿಸಿದೆ.
ಆಗಸ್ಟ್ 21, 2024ರಂದು ಹೊರಡಿಸಲಾಗಿರುವ ಹೊಸ ಸುತ್ತೋಲೆಯ ಪ್ರಕಾರ, ಅನಿಯಮಿತ ಸಣ್ಣ ಉಳಿತಾಯ ಖಾತೆಗಲ್ನ್ನು ಕ್ರಮಬದ್ಧಗೊಳಿಸುವ ಅಧಿಕಾರವನ್ನು ವಿತ್ತ ಸಚಿವಾಲಯಕ್ಕೆ ನೀಡಲಾಗಿದ್ದು, ಈ ಹೊಸ ನಿಯಮಗಳು ಅಕ್ಟೋಬರ್ 1, 2024 ರಿಂದ ಅನ್ವಯವಾಗಲಿವೆ. ಅಂತೆಯೇ ಪಿಪಿಎಫ್ ಸಂಬಂಧಿತ ಮೂರು ನಿಯಮಗಳು ಕೂಡ ಬದಲಾಗಲಿವೆ.
ಹೊಸ ನಿಯಮದ ಪ್ರಕಾರ, ಅಪ್ರಾಪ್ತರ ಹೆಸರಿನಲ್ಲಿ ತೆಗೆಯಲಾಗಿರುವ ಪಿಪಿಎಫ್ ಖಾತೆಗೆ ಪೋಸ್ಟ್ ಆಫೀಸ್ ಉಳಿತಾಯ ಖಾತೆ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಅಪ್ರಾಪ್ತ ವಯಸ್ಕ ವ್ಯಕ್ತಿಯು ಖಾತೆಯನ್ನು ತೆರೆಯಲು ಅರ್ಹನಾಗುವವರೆಗೆ, ಅಂದರೆ ವ್ಯಕ್ತಿಗೆ 18 ವರ್ಷ ವಯಸ್ಸಾದಾಗ ಅಂತಹ ಅನಿಯಮಿತ ಖಾತೆಗಳಿಗೆ ಪಿಪಿಎಫ್ ಖಾತೆಯಷ್ಟೇ ಬಡ್ಡಿಯನ್ನು ನೀಡಲಾಗುತ್ತದೆ. ಅಂತಹ ಖಾತೆಗಳ ಮುಕ್ತಾಯದ ಅವಧಿಯನ್ನು ಅಪ್ರಾಪ್ತ ವಯಸ್ಕನಾದ ದಿನಾಂಕದಿಂದ ಲೆಕ್ಕಹಾಕಲಾಗುತ್ತದೆ, ಅಂದರೆ, ಖಾತೆಯನ್ನು ತೆರೆಯಲು ವ್ಯಕ್ತಿಯು ಅರ್ಹನಾಗುವ ದಿನಾಂಕ.
ಒಂದೊಮ್ಮೆ ನೀವು ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದಿದ್ದರೆ, ಠೇವಣಿಯು ಅನ್ವಯವಾಗುವ ವಾರ್ಷಿಕ ಮಿತಿಯೊಳಗೆ ಬರುವವರೆಗೆ ಪ್ರಾಥಮಿಕ ಖಾತೆಯು ಸ್ಕೀಮ್ ಬಡ್ಡಿದರವನ್ನು ಗಳಿಸುತ್ತದೆ.
ಎರಡನೇ ಖಾತೆಯಲ್ಲಿನ ಬ್ಯಾಲೆನ್ಸ್ ಅನ್ನು ಮೊದಲ ಖಾತೆಯೊಂದಿಗೆ ವಿಲೀನಗೊಳಿಸಲಾಗುತ್ತದೆ, ಪ್ರಾಥಮಿಕ ಖಾತೆಯು ಪ್ರತಿ ವರ್ಷ ಅನ್ವಯವಾಗುವ ಹೂಡಿಕೆಯ ಸೀಲಿಂಗ್ ಅಡಿಯಲ್ಲಿ ಉಳಿಯುತ್ತದೆ. ವಿಲೀನದ ನಂತರ, ಪ್ರಾಥಮಿಕ ಖಾತೆಯು ಪ್ರಸ್ತುತ ಸ್ಕೀಮ್ ಬಡ್ಡಿದರವನ್ನು ಗಳಿಸುವುದನ್ನು ಮುಂದುವರಿಸುತ್ತದೆ.
1968 ರ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ ಅಡಿಯಲ್ಲಿ ತೆರೆಯಲಾದ ಸಕ್ರಿಯ ಎನ್‌ಆರ್‌ಐ ಪಿಪಿಎಫ್ ಖಾತೆಗಳು, ಖಾತೆದಾರರ ರೆಸಿಡೆನ್ಸಿ ಸ್ಥಿತಿಯನ್ನು ನಿರ್ದಿಷ್ಟವಾಗಿ ಫಾರ್ಮ್ H ಕೇಳದೆ ಇದ್ದಲ್ಲಿ, ಖಾತೆದಾರರಿಗೆ (ಭಾರತೀಯ ಪ್ರಜೆಯಾದ ಭಾರತೀಯ ನಾಗರಿಕರಿಗೆ) ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ನೀಡಲಾಗುವ ಬಡ್ಡಿದರವನ್ನಷ್ಟೇ ನೀಡಲಾಗುತ್ತದೆ. ಆದಾಗ್ಯೂ, ಅವರು ಸೆಪ್ಟೆಂಬರ್ 30, 2024 ರವರೆಗೆ ಮಾತ್ರ ಈ ಬಡ್ಡಿಯನ್ನು ಸ್ವೀಕರಿಸುತ್ತಾರೆ. ಅಕ್ಟೋಬರ್ 01ರಿಂದ ಮೇಲೆ ಉಲ್ಲೇಖಿಸಲಾದ ಪಿಪಿಎಫ್ ಖಾತೆಯು ಯಾವುದೇ ಬಡ್ಡಿಯನ್ನು ಕೂಡ ಪಡೆಯುವುದಿಲ್ಲ.