15ನೇ ವಯಸ್ಸಿಗೆ ಲವ್‌, ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ ಇದೀಗ ಸ್ಟಾರ್‌ ಹೀರೋಯಿನ್‌..!

Sat, 04 May 2024-12:06 pm,

ನಟಿ ಪೂಜಾ ಬ್ಯಾನರ್ಜಿ ನಿಜ ಜೀವನದಲ್ಲಿ ಅನೇಕ ತಿರುವುಗಳಿವೆ. 15ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ನಟಿ, ತನ್ನ ಗೆಳೆಯ ಅರುಣೋಯ್ ಚಕ್ರವರ್ತಿಯೊಂದಿಗೆ ಮನೆಯಿಂದ ಮುಂಬೈಗೆ ಓಡಿಹೋಗಿದ್ದರು. ಇಲ್ಲಿಂದ ಅವರ ಸಿನಿಮಾ ಪಯಣ ಆರಂಭವಾಯಿತು.  

ಪೂಜಾ ಬ್ಯಾನರ್ಜಿ 2004 ನಟ ಅರುಣ್‌ ಚಕ್ರವರ್ತಿ ಅವರನ್ನು ವಿವಾಹವಾದರು. ಮದುವೆಯಾದ ಕೆಲವು ವರ್ಷಗಳ ನಂತರ, ಅವರ ಸಂಬಂಧ ಹದಗೆಡಲು ಪ್ರಾರಂಭಿಸಿತು. ನಂತರ 2013 ರಲ್ಲಿ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು.   

ಈ ಘಟನೆಯಿಂದ ತೀವ್ರವಾಗಿ ನೊಂದಿದ್ದ ಪೂಜಾ ಬ್ಯಾನರ್ಜಿ, ತನ್ನ ಕೆಲಸದತ್ತ ಗಮನ ಹರಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದಳು. ಪೂಜಾ ತಮ್ಮ ವೃತ್ತಿಜೀವನದಲ್ಲಿ 27 ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ 'ದೇವೋನ್ ಕೆ ದೇವ್... ಮಹಾದೇವ್' ಧಾರಾವಾಹಿಯು ಪೂಜಾಗೆ ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತು.   

ಅರುಣ್‌ ನಂತರ ಪೂಜಾ ಬ್ಯಾನರ್ಜಿ ನಟ ಕುನಾಲ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದರು. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. 2021 ರಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಪೂಜಾ 2020 ರಲ್ಲಿ ಕೃಷಿವ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು.   

ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ, ಪೂಜಾ ʼನಾವು ಬೆಂಗಾಲಿ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದೇವೆ. ಮದುವೆಗೂ ಮುನ್ನವೇ ಮಗುವಾಗಿದ್ದರೂ ಮತ್ತೆ ಮದುವೆಯಾಗುವುದು ಹೊಸ ಅನುಭವ. ನೀಡಿದೆ ಅಂತ ಹೇಳಿಕೊಂಡಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link