“ಈಕೆಯ ಮಗುವಾಗಿ ಮರುಜನ್ಮ ಪಡೆಯುವೆ”- ರಾಮಚಂದ್ರ ಗುರೂಜಿ ಬಳಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಆತ್ಮ ಹೇಳಿದ್ದೇನು?

Tue, 25 Jun 2024-5:55 pm,

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪುನರ್‌ ಜನ್ಮ ತಜ್ಞ ರಾಮಚಂದ್ರ ಗುರೂಜಿ, ಪುನೀತ್ ರಾಜ್‌ ಕುಮಾರ್ ಅವರ ಆತ್ಮದ ಜೊತೆ ಮಾತನಾಡಿದ್ದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಹೀಗಿರುವಾಗ ಅಪ್ಪು ಅವರ ಆತ್ಮ ಗುರೂಜಿ ಜೊತೆ ಏನು ಹೇಳಿದ್ರು? ಗುರೂಜಿ ಏನೆಲ್ಲಾ ಮಾತನಾಡಿದ್ರು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ,

ಈ ಹಿಂದೆ ಕಸ್ತೂರಿ ವಾಹಿನಿಯಲ್ಲಿ  ಪ್ರಸಾರವಾಗುತ್ತಿದ್ದ ‘ಜನ್ಮಾಂತರ’ ಕಾರ್ಯಕ್ರಮವನ್ನು ಪುನರ್‌ ಜನ್ಮ ತಜ್ಞ ರಾಮಚಂದ್ರ ಗುರೂಜಿ ನಡೆಸಿಕೊಡುತ್ತಿದ್ದರು. ಅನೇಕ ಸೆಲೆಬ್ರಿಟಿಗಳು ಕೂಡ ಇದರ ಭಾಗವಾಗಿದ್ದರು.

2021 ಅಕ್ಟೋಬರ್ 29ರಂದು ಪುನೀತ್ ರಾಜ್‌ ಕುಮಾರ್ ಹೃದಯದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದರು.

ರಾಮಚಂದ್ರ ಗುರೂಜಿ ಕೇಳಿದ ಮೊದಲ ಪ್ರಶ್ನೆ, “ಅಪ್ಪು ಅವರೇ ನಿಮ್ಮ ಸಾವಿನ ಬಗ್ಗೆ ಅನೇಕ ಅಪೋಹಳಿವೆ ಇದು ನಿಜನಾ?”- ಈ ಪ್ರಶ್ನೆಗೆ “ಇಲ್ಲ, ನಾನು ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿದ್ದೇನೆ” ಎಂದಿದ್ದಾರೆ.

ಎರಡನೇ ಪ್ರಶ್ನೆ, “ದೇಹದಿಂದ ಬಿಟ್ಟು ಹೋದ್ರಲ್ಲ ಈಗ ಎಲ್ಲಿದ್ದೀರಿ?”- ಅದಕ್ಕೆ, “ಅಪ್ಪ-ಅಮ್ಮನ ಹುಡುಕಾಟದಲ್ಲಿ ಇದ್ದೇನೆ’ ಎಂದಿದ್ದಾರೆ.

ಮೂರನೇ ಪ್ರಶ್ನೆ, “ಮತ್ತೆ ಹುಟ್ಟಿ ಬರ್ತಿರಾ?- ಅದಕ್ಕೆ, “ಅದರ ಬಗ್ಗೆ ಯೋಚನೆ ಮಾಡಿಲ್ಲ. ಹುಟ್ಟಿ ಬರುವುದಾದರೆ ನಾನು ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುತ್ತೇನೆ” ಎಂದು ಹೇಳಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link