ಅಪ್ಪು ನೆನಪು : ಪುನೀತ್ ರಾಜ್​ ಕುಮಾರ್ ಅಭಿನಯದ​ `ದಿ ಬೆಸ್ಟ್`​ ಸಿನಿಮಾಗಳಿವು!

Wed, 26 Oct 2022-1:11 pm,

2009ರಲ್ಲಿ ಸೂಪರ್ ಹಿಟ್ ಕೊಟ್ಟ ಸಿನಿಮಾ ರಾಮ್. ಇದು ಫ್ಯಾಮಿಲಿ ಕಥೆ ಆಧರಿಸಿದ ಚಿತ್ರ. ಪುನೀತ್ ಹಾಗೂ ಪ್ರಿಯಾಮಣಿ ಜೋಡಿ ಬೆಳ್ಳಿತೆರೆ ಮೇಲೆ ಮೋಡಿ ಮಾಡಿತ್ತು.

ಪುನೀತ್​ ಸಿನಿಮಾ ಕೆರಿಯರ್​​​ನಲ್ಲಿ ಆಲ್ ಟೈಮ್ ರೆಕಾರ್ಡ್ ಸಿನಿಮಾ ರಾಜಕುಮಾರ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುತ್ತದೆ. 

ಪವರ್ ಸ್ಟಾರ್ ಪುನೀತ್‌ ರಾಜ್‌ ಕುಮಾರ್ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿನಿಮಾ ಪೃಥ್ವಿ. 

ರೇಡಿಯೋ ಜಾಕಿಯಾಗಿ ಅಪ್ಪು ಕಾಣಿಸಿಕೊಂಡಿದ್ದ ಸಿನಿಮಾ ಮಿಲನ. ಪ್ರಕಾಶ್ ನಿರ್ದೇಶನ ಮಾಡಿದ್ದ ಮಿಲನ ಬರೋಬ್ಬರಿ ಒಂದು ವರ್ಷ ಪ್ರದರ್ಶನ ಕಾಣಿತ್ತು. ಪುನೀತ್ ಸಿನಿ ಜರ್ನಿಯಲ್ಲಿ ಮಿಲನ ಸಿನಿಮಾ ಮೆಗಾ ಹಿಟ್ ತಂದು ಕೊಟ್ಟ ಚಿತ್ರ.

ಎಸ್​.ನಾರಾಯಣ್ ನಿರ್ದೇಶನದ 2004ರಲ್ಲಿ ತೆರೆ ಕಂಡಿದ್ದ ಮೌರ್ಯ ಸಿನಿಮಾದಲ್ಲಿ ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್ ಅಪ್ಪು ಜೊತೆ ರೊಮ್ಯಾನ್ಸ್ ಮಾಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ 8 ಕೋಟಿ ಕಲೆಕ್ಷನ್ ಮಾಡಿತ್ತಂತೆ.

ಜಾಕಿ ಚಿತ್ರದಲ್ಲಿ ನಟ ಪುನೀತ್ ರಾಜ್​ಕುಮಾರ್​​​ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು. 

2002ರಲ್ಲಿ 'ಅಪ್ಪು' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ನಿರ್ದೇಶಕ ಮಹೇಶ್ ಬಾಬು ಅವರು ಚೊಚ್ಚಲ ಸಿನಿಮಾ ಆಕಾಶ್ ಪುನೀತ್ ರಾಜ್ ಕುಮಾರ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಚಿತ್ರ. 

2003ರಲ್ಲಿ ಅಣ್ಣಾವ್ರ ಬ್ಯಾನರ್​​ನಲ್ಲಿ ನಿರ್ಮಾಣವಾದ 'ಅಭಿ' ಸಿನಿಮಾದಲ್ಲಿ ಪುನೀತ್ ಹಾಗೂ ರಮ್ಯಾ ಜೋಡಿ ಮೋಡಿ ಮಾಡಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link