ಮರೆಯಾದ ನಂತರವೂ 4 ಜನರ ಬಾಳಿಗೆ ಬೆಳಕಾದ ಅಪ್ಪು.. ಪುಣ್ಯಾತ್ಮನಿಂದ ದೃಷ್ಟಿ ಪಡೆದ ಆ ನಾಲ್ವರು ಯಾರು ಗೊತ್ತಾ..?
Puneeth Rajkumar Eye Donation: ಪುನೀತ್ ರಾಜ್‌ಕುಮಾರ್... ಈ ಹೆಸರಿಗೆ ಪರಿಚಯದ ಅಗತ್ಯವೇ ಇಲ್ಲ, ಅಪ್ಪು ಅಂದ್ರೆ ಕರುಣಾಡಿನ ಜನರಿಗೆ ಪಂಚ ಪ್ರಾಣ. ನಟ ತಾನು ಬದುಕಿರುವಾಗ ಅಷ್ಟೆ ಅಲ್ಲ, ಮರೆಯಾದ ನಂತರವೂ ಕೂಡ ತಮ್ಮ ದಾನದಿಂದ ಸಾರ್ಥಕತೆ ಮೆರೆದಿದ್ದಾರೆ, ನಾಲ್ಕು ಜನ ಅಂದರ ಬಾಳಿಗೆ ಬೆಳಕಾಗಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಆ ನಾಲ್ವರು ಯಾರು..? ಈ ಹಿಂದಿನ ಕಥೆಯನ್ನು ವೈದ್ಯರು ಬಿಚ್ಚಿಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ ಅಪ್ಪು ಅವರು ಅಕ್ಟೋಬರ್ 29 ರಂದು ಅಸು ನೀಗಿದ್ದರು, ಇವರ ಸಾವಿನ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರಿಯೇ ಬೆಚ್ಚಿಬಿದ್ದಿತ್ತು.
ಆ ದಿನ ಕರುನಾಡಲ್ಲಿ ಸೂತಕದ ವಾತಾವರಣ ಆವರಿಸಿತ್ತು, ನಕ್ಕು ನಲಿಯುತ್ತಾ ಎಲ್ಲರನ್ನು ರಂಜಿಸುತ್ತಿದ್ದ ಅಪ್ಪು, ಕ್ಷಣಗಳಲ್ಲಿ ಪ್ರಾಣ ತ್ಯಜಿಸಿದ್ದರು, ಸುದ್ದಿ ಕೇಳಿ ಎಲ್ಲರು ಆಘಾತಕ್ಕೊಳಗಾಗಿದ್ದರು, ಇಡೀ ಕರ್ನಾಟಕದ ಜನ ಅಪ್ಪುವಿನ ಸಾವಿಗೆ ಕಣ್ಣೀರು ಹಾಕಿದ್ದರು.
ಅಪ್ಪು ಬದುಕಿರುವಷ್ಟು ದಿನ ಸಾಕಷ್ಟು ಜನರಿಗೆ, ಹಲವಾರು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗದಂತೆ, ಅದೆಷ್ಟೋ ಕುಟುಂಬಗಳಿಗೆ ಬೆಳಕ್ಕಾಗಿದ್ದರು.
ಪುನೀತ್ ರಾಜ್‌ಕುಮಾರ್ ಅವರು ಬದುಕಿರುವಾಗ ಅಷ್ಟೆ ಅಲ್ಲ ಸಾವಿನ ನಂತರವೂ ಕೂಡ ದಾನಿಯಾಗಿದ್ದರು. ನೇತ್ರದಾನ ಮಹಾದಾನ ಎಂದು ಹೇಳುತ್ತಾರೆ. ಅಪ್ಪು ಅವರ ಕುಟುಂಬದವರು ಅಪ್ಪು ಅವರ ಸಾವಿನ ನಂತರ ಅವರ ಕಣ್ಣುಗಳನ್ನು ನಾಲ್ಕು ಅಂದರಿಗೆ ದಾನ ಮಾಡಿ, ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದರು.
ಅಪ್ಪುವಿನ ಸಾವಿನ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿತ್ತು, 3 ಪುರಷರು ಹಾಗೂ, 1 ಮಹಿಳೆಗೆ ಇವರ ಕಣ್ಣುಗಳನ್ನು ದಾನ ಮಾಡಲಾಗಿತ್ತು, ಈ ಮೂಲಕ ಕತ್ತಲೆ ಕವಿದಿದ್ದು ನಾಲ್ಕು ಜನರ ಬಾಳಿನಲ್ಲಿ ಬೆಳಕು ಮೂಡಿತ್ತು.
ಈ ರೀತಿ ಪುನೀತ್ ಅವರು ಬದುಕಿರುವಾಗ ಅಷ್ಟೆ ಅಲ್ಲದೆ ಸಾವಿನ ನಂತರದ ಈ ಕೆಲಸದಿಂದ ಜನರಿಗೆ ಮಾದರಿಯಾಗಿದ್ದಾರೆ. ಆದರೆ ಪುನೀತ್ ಅವರಂತಹ ಪುಣ್ಯಾತ್ಮರ ಕಣ್ಣನ್ನು ದಾನ ಪಡೆದದ್ದು ಹೇಗೆ ಎಂಬ ಸತ್ಯವನ್ನು ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಬಿಚ್ಚಿಟ್ಟಿದ್ದಾರೆ.
ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗ್ ಶೆಟ್ಟಿ ಅವರು ಪುನೀತ್ ಅವರ ಕಣ್ಣನ್ನು ಹೇಗೆ ಕಸಿ ಮಾಡಿ ನಾಲ್ವರಿಗೆ ನೀಡಲಾಯಿತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಮೈಕ್ರೋಸರ್ಜರಿಯಲ್ಲಿನ ಇತ್ತೀಚಿನ ತಂತ್ರಜ್ಞಾನದ ಮೂಲಕ ಒಂದೇ ದಿನದಲ್ಲಿ ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯವಾಯಿತು ಎಂದು ವೈದ್ಯರು ಬಿಚ್ಚಿಟ್ಟಿದ್ದಾರೆ. ಕಾರ್ನಿಯಾದ ವಿವಿಧ ಸ್ಲೈಸ್‌ಗಳನ್ನು ಅವರ ದೃಷ್ಟಿಹೀನತೆಯ ಸ್ವರೂಪವನ್ನು ಅವಲಂಬಿಸುವ ಮೂಲಕ ಅನೇಕ ಜನರಿಗೆ ದಾನ ಮಾಡಿದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
'ಕಾರ್ನಿಯಲ್ ಬಟನ್' ಎಂಬ ಭಾಗವನ್ನು ಕೆರಾಟೋಕೊನಸ್ ಮತ್ತು ಕಾರ್ನಿಯಲ್ ಡಿಸ್ಟ್ರೋಫಿಯಿಂದ ಬಳಲುತ್ತಿರುವ ಇಬ್ಬರು ಯುವ ರೋಗಿಗಳಿಗೆ ಅಳವಡಿಸಲಾಗಿತ್ತು. ಕೆರಾಟೋಕೊನಸ್ ಕಣ್ಣಿನ ಕಾಯಿಲೆಯಾಗಿದ್ದು ಅದು ಕಾರ್ನಿಯಾದ ರಚನೆಯ ಮೇಲೆ ಪರಿಣಾಮ ಬೀರುತ್ತದೆ.
ಡೀಪ್ ಆಂಟೀರಿಯರ್ ಲ್ಯಾಮೆಲ್ಲರ್ ಕೆರಾಟೊಪ್ಲ್ಯಾಸ್ಟಿ ಎಂದು ಕರೆಯಲ್ಪಡುವ ಪ್ರಕ್ರಿಯೆಯ ಮೂಲಕ ವೈದ್ಯರು ಕಣ್ಣಿನ ಕಸಿಯನ್ನು ಮಾಡಿ ನಾಲ್ವರಿಗೆ ಕಣ್ಣು ಕಾಣುವಂತೆ ಮಾಡಿದ್ದರು.