ಅಪ್ಪು ಇಲ್ಲದೆ ಮೂರು ವರ್ಷ.. ʻರಾಜಕುಮಾರʼನ ಈ ಗುಣಗಳು ಎಲ್ಲರಿಗೂ ಮಾದರಿ..!
Puneet Rajkumar: ಇಂದು ಕರುಣಾಡಿ ಜನತೆ ಕರುನಾಡ ರಾಜಕುಮಾರನಿಗಾಗಿ ಕಣ್ಣೀರಿಡುತ್ತಿದ್ದಾರೆ, ಇಂದಿಗೆ ಅಪ್ಪು ನಮ್ಮೆಲ್ಲರನ್ನು ಅಗಲಿ ಮೂರು ವರ್ಷ ಕಳೆದಿದೆ. ಆದರೆ ಅವರು ಬಿಟ್ಟು ಹೋದ ಹೆಜ್ಜೆಯ ಗುರುತುಗಳು ಇಂದು ಇರುವವರಿಗೂ ಮುಂದೆ ಬರುವವರೆಗೂ ಮಾದರಿ ಅಂತಲೇ ಹೇಳಬಹುದು.
ಪುನೀತ್ ರಾಜ್‌ಕುಮಾರ್ ಅವರು ಬಾಲ್ಯನಟನಾಗಿ ಸಿನಿಮಾ ಇಂಡ್ಸ್ಟರಿಗೆ ಎಂಟ್ರಿ ಕೊಟ್ಟವರು, ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡವರು.
ಕೇವಲ ಆಕ್ಟಿಂಗ್ ಮಾತ್ರ ಅಲ್ಲ, ಅಪ್ಪುವಿನ ಡ್ಯಾನ್ಸ್ ಅಂತೂ ಅಭಿಮಾನಿಗಳಿಗೆ ಅಚ್ಚುಮೆಚ್ಚು, ಪುನೀತ್ ಅವರು ಡ್ಯಾನ್ಸ್ ಮಾಡೋಕೆ ಶುರು ಮಾಡಿದ್ದಾರೆ ಅಂದ್ರೆ ಅವರ ಸ್ಟೆಪ್ಸ್‌ಗೆ ಫಿದಾ ಆಗದವರೇ ಇಲ್ಲ.
ಹೀಗೆ ಆಕ್ಟಿಂಗ್ ಹಾಗೂ ಡ್ಯಾನ್ಸ್ ಅಷ್ಟೆ ಅಲ್ಲ, ಸಿಂಗಿಂಗ್ ಅಲ್ಲೂ ಕೂಡ ಸಖತ್ ಆಗಿರುತ್ತಿತ್ತು. ಅಪ್ಪು ಹಾಡುಗಳು ಇಂದಿಗೂ ಹಲವರಿಗೆ ಹಚ್ಚು ಮೆಚ್ಚು, ಅಪ್ಪು ಕಂಠ ಸಿರಿಯಲ್ಲಿ ಹಾಡಿದ ಹಾಡುಗಳು, ಇಂದಿಗೂ ಹಲವರ ಮನಸ್ಸು ಕದಡುತ್ತವೆ, ಇವತ್ತಿಗೂ ಅವರ ಹಾಡುಗಳನ್ನು ಕೇಳಿದ್ರೆ ರೋಮಾಂನಚನವಾಗುತ್ತೆ.
ಹೀಗೆ ಕೇವಲ ಆಕ್ಟಿಂಗ್‌ಗಷ್ಟೆ ಸೀಮಿತವಾಗದ ಬಹುಮುಖ ಪ್ರತಿಭೆ ಅಪ್ಪು ಅವರದ್ದು. ಅಪ್ಪು ಅವರು ಸಿನಿಮಾ ಇಂಡಸ್ಟ್ರಿಗೆ ನೀಡಿದ ಕೊಡುಗೆ ಅಪಾರ.
ಅಪ್ಪು ಅವರು ತಮ್ಮದೆ ಆದ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭಿಸಿದ್ದರು, ಪಿಆರ್‌ಕೆ ಸ್ಟೋಡಿಯೋಸ್ ಎಂಬ ಸಂಸ್ಥೆಯಿಂದ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದರು.
ಸಿನಿಮಾ ಇಂಡಸ್ಟ್ರಿ ಬಿಟ್ಟರೆ ಅಪ್ಪು ಅವರು ತಮ್ಮ ಸಾಮಾಜಿಕ ಸೇವೆಯಂತಹ ಕೆಲಸಗಲನ್ನು ಮಾಡುತ್ತಾ ಜನ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ, ಕಾನದ ಕೈಗಳಲ್ಲಿ ಸಹಾಯ ಮಾಡಿ, ಅದೆಷ್ಟೋ ಜನರಿಗೆ ದಾರದೀಪವಾಗಿದ್ದ ಅಪ್ಪು ಇಂದು ನಮ್ಮ ನಿಮ್ಮಲ್ಲರನ್ನು ಬಿಟ್ಟು ದೂರವಾಗಿದ್ದಾರೆ.