Punjab Election 2022: ಚುನಾವಣಾ ಕಣಕ್ಕೆ ಧುಮುಕಿದ Navjot Singh Sidhu ಪುತ್ರಿ, `ಅಪ್ಪ ಗೆದ್ದ ನಂತರವೇ ನನ್ನ ಮದುವೆ` ಎಂದ Rabia Sidhu
1. ಮನೆ ಮನೆಗೆ ತೆರಳಿ ಪ್ರಚಾರ -ನವಜೋತ್ ಸಿಂಗ್ ಸಿಧು ಅವರು ಪಂಜಾಬ್ನ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಬಿಯಾ ತನ್ನ ತಂದೆಯ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನವಜೋತ್ ಸಿಂಗ್ ಸಿಧುಗೆ ಅಕಾಲಿದಳದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿಕ್ರಮ್ ಸಿಂಗ್ ಮಜಿಥಿಯಾ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
2. ಚರಣಜೀತ್ ಸಿಂಗ್ ಚನ್ನಿ ಗುರಿಯಾಗಿಸಿದ ರಬಿಯಾ - ತಮ್ಮ ಚುನಾವಣಾ ಪ್ರಚಾರದ ವೇಳೆ ರಬಿಯಾ ಚರಣ್ಜಿತ್ ಸಿಂಗ್ ಚನ್ನಿ (Charanjit Singh Channi) ಅವರನ್ನು ಗುರಿಯಾಗಿಸಿದ್ದಾರೆ. ಚನ್ನಿ ಖಾತೆಯಲ್ಲಿ 133 ಕೋಟಿ ರೂ. ಗಳಿವೆ ಆದರೆ, ನನ್ನ ತಂದೆ ಪಂಜಾಬ್ನ (Punjab) ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ, ಅವರನ್ನು ಗೌರವಿಸಬೇಕು ಎಂದು ರಬಿಯಾ ಹೇಳಿದ್ದಾಳೆ.
3. ಸತ್ಯದ ಪರವಾಗಿದ್ದಾರೆ ನನ್ನ ತಂದೆ - ಈ ಹಿಂದೆ ನಡೆದ ಎಲ್ಲಾ ವಿವಾದಗಳ ಬಗ್ಗೆ ಮಾತನಾಡಿರುವ ರಬಿಯಾ, 'ನನ್ನ ತಂದೆ ಸತ್ಯದ ಪರವಾಗಿದ್ದಾರೆ. ಕಷ್ಟಗಳು ಸತ್ಯದ ದಾರಿಯಲ್ಲಿ ಬರುತ್ತವೆ, ಆದ್ದರಿಂದ ಅವರು ಮುಂದೆ ಸಾಗಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಿಧು ಪುತ್ರಿ ಹೇಳಿದ್ದಾಳೆ.
4. ತಂದೆಯ ಗೆಲುವಿನ ಬಳಿಕವೇ ವಿವಾಹ - ಚುನಾವಣಾ ಪ್ರಚಾರದ ವೇಳೆ ಮದುವೆ ವಿಚಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಬಿಯಾ 'ತಂದೆ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ' ಎಂದು ಹೇಳಿದ್ದರೆ, ಕೆಲವರು ಇದನ್ನು ರಾಜಕೀಯ ಸ್ಟಂಟ್ ಎಂದೂ ಕರೆಯುತ್ತಿದ್ದಾರೆ.
5. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿರುತ್ತಾಳೆ ರಬಿಯಾ-ಆದರೆ ಸಿಧು ಮಾತ್ರ ಇದುವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪಂಜಾಬ್ ನಲ್ಲಿ ಫೆಬ್ರುವರಿ 20ರಂದು ಮತದಾನ ನಡೆಯಲಿದೆ. ರಬಿಯಾ, ಸಿಧು ಅವರ ರಾಜಕೀಯಕ್ಕೆ ನೇರ ಸಂಬಂಧ ಹೊಂದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿರುವ ರಬಿಯಾ, ಆಗಾಗ್ಗ ತನ್ನ ಮನಮೋಹಕ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾಳೆ.