ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !
ದೀಪಾವಳಿ ಹಬ್ಬ ಅಸಲಿಗೆ ಧನತ್ರಯೋದಶಿಯಿಂದಲೇ ಆರಂಭವಾಗುತ್ತದೆ. ಧನತ್ರಯೋದಶಿಗೆ ವಿಶೇಷ ಮನ್ನಣೆ ಇದೆ.ಈ ದಿನದಂದು ಜನರು ತಮ್ಮ ಅಗತ್ಯಗಳಿಗೆ ಮತ್ತು ಸ್ಥಾನಮಾನಕ್ಕೆ ಅನುಗುಣವಾಗಿ ವಸ್ತುಗಳನ್ನು ಖರೀದಿಸುತ್ತಾರೆ.
ಧನತ್ರಯೋದಶಿ ಲಕ್ಷ್ಮಿ ದೇವಿಗೆ ಸಂಬಧಿಸಿದ್ದಾಗಿದೆ. ಈ ದಿನ ಕೆಲವು ವಸ್ತುಗಳನ್ನು ಖರೀದಿಸಿ ತರಬೇಕು. ಅದರಲ್ಲಿಯೂ ಮುಖ್ಯವಾಗಿ ಈ ದಿನ ಈ ಬೀಜವನ್ನು ಖರೀದಿಸಿ ತರಲೇಬೇಕು ಎನ್ನುತ್ತದೆ ಶಾಸ್ತ್ರ.
ಹೌದು ಧನತ್ರಯೋದಶಿಯಂದು ಕೊತ್ತಂಬರಿ ಬೀಜವನ್ನು ಖರೀದಿಸಿ ತರಬೇಕು. ಈ ದಿನ ಕೊತ್ತಂಬರಿ ಖರೀದಿಸುವುದು ನಂಬಿಕೆ ಮತ್ತು ಸಂಪ್ರದಾಯ.
ಈ ದಿನ ಮುಸ್ಸಂಜೆ ಹೊತ್ತಲ್ಲಿ ಕೊತ್ತಂಬರಿ ಬೀಜ ಖರೀದಿಸಿ ತಂದರೆ ಜೊತೆಯಲ್ಲಿಯೇ ಮಹಾಲಕ್ಷ್ಮೀ ಕೂಡಾ ಮನೆ ಪ್ರವೇಶಿಸುತ್ತಾಳೆ ಎನ್ನಲಾಗಿದೆ.
ಅಲ್ಲದೆ ಈ ದಿನದ ಪೂಜೆಯಲ್ಲಿ ಈ ಕೊತ್ತಂಬರಿ ಬೀಜಗಳನ್ನು ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ಇದರಿಂದ ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾಳೆ. ಜೊತೆಗೆ ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ.
ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಆದರೆ ಧನಾತ್ಮಕ ಶಕ್ತಿಯ ಹರಿವು ಹೆಚ್ಚಿ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.
ಸೂಚನೆ :ಮೇಲಿನ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.