2 ಮಕ್ಕಳ ತಾಯಿ, 39 ವಯಸ್ಸು.. ಸೌಂದರ್ಯ ಕೊಂಚವೂ ತಗ್ಗಿಲ್ಲ..! ಪುಷ್ಪಾ ನಟಿಯ ಫೊಟೋ ಕ್ರೇಜ್
)
ನಾಗ ಚಿತ್ರದ ಮೂಲಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಟಾಲಿವುಡ್ ಚಿತ್ರರಂಗಕ್ಕೆ ಪರಿಚಯವಾದ ಅನಸೂಯಾಗೆ ಆಗ ಅಷ್ಟೊಂದು ಮನ್ನಣೆ ಸಿಗಲಿಲ್ಲ.
)
ಜಬರ್ದಸ್ತ್ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಕಿರುತೆರೆಗೆ ಪ್ರವೇಶಿಸಿದ ನಂತರ, ತಮ್ಮ ಮಾತುಗಾರಿಕೆ ಮೂಲಕ ಜನಪ್ರಿಯತೆಯನ್ನು ಗಳಿಸಿದರು.
)
ಅದರಲ್ಲೂ ಜಬರ್ದಸ್ತ್ ನಲ್ಲಿ ತನ್ನ ಸುಂದರ ವಾಕ್ಚಾತುರ್ಯದಿಂದ ಎಲ್ಲರ ಮನಸೆಳೆದ ಈ ಮೋಹನಾಂಗಿ ದಶಕಕ್ಕೂ ಹೆಚ್ಚು ಕಾಲ ಆ್ಯಂಕರ್ ಆಗಿ ಮಿಂಚಿದಳು.
ಜಬರ್ದಸ್ತ್ ಮೂಲಕ ಫೇಮಸ್ ಅದ ನಂತರ ಚಿತ್ರರಂಗಕ್ಕೆ ಕಾಲಿಟ್ಟ ಅನಸೂಯಾ ರಾಮ್ ಚರಣ್-ಸಮಂತಾ ಅಭಿನಯದ ರಂಗಸ್ಥಳಂ ಮೂಲಕ ಮುನ್ನೆಲೆಗೆ ಬಂದರು.
ಸುಕುಮಾರ್ ನಿರ್ದೇಶನದ ರಂಗಸ್ಥಳಂ ಸಿನಿಮಾದಲ್ಲಿ ರಂಗಮ್ಮ ಅತ್ತೆ ಪಾತ್ರದಲ್ಲಿ ಅದ್ಬುತವಾಗಿ ನಟಿಸಿ ಅಭಿಮಾನಿಗಳ ಮನ ಗೆದ್ದರು ಅನಸೂಯಾ.. ಈ ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದರು.
ಸಧ್ಯ ಲೇಡಿ ಓರಿಯೆಂಟೆಡ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಅನಸೂಯಾ ಸಿನಿಮಾಗಳ ಜೊತೆಗೆ ಸಮಾಜದಲ್ಲಿ ನಡೆಯುವ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾರೆ. ಕೆಲವೊಮ್ಮೆ ವಿವಾದಕ್ಕೂ ಗುರಿಯಾಗುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಚೆಲುವೆ ಆಗಾಗ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಾ ನಡು ನಡುವೆ ತಮ್ಮ ಗ್ಲಾಮರ್ ಶೋ ಮೂಲಕ ರಂಜಿಸುತ್ತಾರೆ.
ಈ ಕ್ರಮದಲ್ಲಿ ಇದೀಗ ಹೊಸದಾಗಿ ಫೋಟೋ ಶೂಟ್ ಮಾಡಿಸಿರುವ ನಟಿ ಎಲ್ಲರ ಮನಗೆದ್ದಿದ್ದಾಳೆ. ಪ್ರಿಂಟೆಡ್ ಗೌನ್ ತೊಟ್ಟು ಕ್ಯೂಟಾಗಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ..
ಸಧ್ಯ ಅನಸೂಯಾ ಹಂಚಿಕೊಂಡಿರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.. ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ..