42 ವರ್ಷದ ಅಲ್ಲು ಅರ್ಜುನ್ ಫಿಟ್ನೆಸ್ ರಹಸ್ಯವೇನು? ಬನ್ನಿ ಡಯಟ್ ನಲ್ಲಿ ಇದು ಕಡ್ಡಾಯ!!

Thu, 08 Aug 2024-7:15 pm,

ವಯಸ್ಸು ಹೆಚ್ಚಾದಂತೆ ಹೀರೋಗಳು ಪಡುವ ಕಷ್ಟಗಳು ಸಾಮಾನ್ಯವಾದುದಲ್ಲ. ಫಿಟ್‌ ಆಗಿರಲು ಹಲವಾರು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.. ಇದಕ್ಕಾಗಿ ತಮ್ಮ ನೆಚ್ಚಿನ ಆಹಾರವನ್ನು ತ್ಯಾಗ ಮಾಡಬೇಕು.. ಹಾಗೇ ದೇಹವನ್ನು ಫಿಟ್ ಆಗಿರಿಸಿಕೊಂಡವರಲ್ಲಿ ಅಲ್ಲು ಅರ್ಜುನ್ ಒಬ್ಬರು.    

ಹೀರೋಗಳು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಬೇಕು.. ಅಭಿಮಾನಿಗಳು ತಮ್ಮ ಫಿಟ್‌ನೆಸ್ ದೇಹದಿಂದ ಹುಚ್ಚೆದ್ದು ಕುಣಿಯಬೇಕು.. ಇದೇ ಈಗಿರುವ ಫಾರ್ಮುಲಾ... ಅಲ್ಲು ಅರ್ಜುನ್ ಟಾಲಿವುಡ್ ನ ಬಹುಬೇಡಿಕೆ ನಟ.. ಕೆಲವು ಬಾಲಿವುಡ್ ನಟಿಯರು ಸೌತ್‌ ಹೀರೋಗಳನ್ನು ಅವಮಾನಿಸಿದರೆ ಅವರನ್ನು ಹಿಡಿದು ಸಿಕ್ಸ್ ಪ್ಯಾಕ್ ತೋರಿಸುತ್ತಾರೆ ಆ ಲೆವೆಲ್‌ಗೆ ಬನ್ನಿ ಫಿಟ್ನೆಸ್‌ ಮೆಂಟೇನ್‌ ಮಾಡಿದ್ದಾರೆ..   

ಟಾಲಿವುಡ್ ಲೇಡಿ ಅಭಿಮಾನಿಗಳು ದೇಶಮುದುರು ಚಿತ್ರದಲ್ಲಿ ಬನ್ನಿಯನ್ನು ನೋಡಿ ತುಂಬಾ ಇಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾದಿಂದ ಬನ್ನಿ ಇಮೇಜ್ ಎಲ್ಲೋ ಹೋಗಿದೆ. ಬಾಲಿವುಡ್ ಮಂದಿಯ ಬಾಯಿಯೂ ಕೊಂಚ ಮುಚ್ಚಿದೆ. ಆದರೆ ಅಂದಿನಿಂದ ಅಲ್ಲು ಅರ್ಜುನ್ ಅದೇ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದಾರೆ.    

ಅಲ್ಲು ಅರ್ಜುನ್ ಆಕ್ಷನ್ ಸೀಕ್ವೆನ್ಸ್ ನೋಡಿದ್ರೆ ಈಗಳು ಎಲ್ಲರೂ ಶಾಕ್‌ ಆಗೋದು ಫಿಕ್ಸ್..‌  ಆದ್ರೆ ಅಲ್ಲು ಅರ್ಜುನ್ ಇಷ್ಟೊಂದು ಫಿಟ್ ಮೆಂಟೇನ್ ಮಾಡೋದು ಹೇಗೆ.. ಅವರ ಫಿಟ್ನೆಸ್ ಸೀಕ್ರೆಟ್ ಏನು..? ಏನು ತಿನ್ನುತ್ತಾರೆ?’ ಎಂದು ಐಕಾನ್ ಸ್ಟಾರ್ ಅವರ ಡಯಟ್ ರಹಸ್ಯದ ಬಗ್ಗೆ ಹಲವರು ಮಾತನಾಡುತ್ತಾರೆ.   

ನಟ ಅಲ್ಲು ಅರ್ಜುನ್ .. ಜಿಮ್ ಗಾಗಿಯೇ ಸ್ವಲ್ಪ ಸಮಯ ಮೀಸಲಿಡುತ್ತಾರೆ. ಬಳಿಕ ಅವರ ಆಹಾರಕ್ಕೆ ಬಂದರೇ ಬನ್ನಿಗೆ ಮೊಟ್ಟೆಗಳೆಂದರೇ ಇಷ್ಟವಂತೆ.. ಅದಕ್ಕಾಗಿಯೇ ಅವರ ಆಹಾರದಲ್ಲಿ ಬೇಯಿಸಿದ ಮೊಟ್ಟೆ ಇದ್ದೆ ಇರುತ್ತದೆ ಎಂದು ವರದಿಯಾಗಿದೆ. ಇವುಗಳ ಜೊತೆಗೆ ಹೆಚ್ಚು ಎಣ್ಣೆ ಇಲ್ಲದ, ತರಕಾರಿ ಹಾಗೂ ನಾನ್ ವೆಜ್ ಆಹಾರವನ್ನೂ ಬನ್ನಿ ತಿನ್ನುತ್ತಾರೆ..   

ಎಲ್ಲರಂತೆ ಸಿಕ್ಕಾಪಟ್ಟೆ ಡಯೆಟ್‌ ಫಾಲೋ ಮಾಡುವುದು ಅಲ್ಲು ಅರ್ಜುನ್ ಗೆ ಇಷ್ಟವಿಲ್ಲ.. ಅದಕ್ಕೇ ಇಷ್ಟದ ಆಹಾರವನ್ನು ಮಿತವಾಗಿ ತಿನ್ನುತ್ತಾರೆ.. ಅದಕ್ಕೆ ತಕ್ಕಂತೆ ಬನ್ನಿ ಜಿಮ್ ಕೂಡ ಮಾಡುತ್ತಾರೆ.   

ಇನ್ನು ಈ ಪ್ಯಾನ್ ಇಂಡಿಯಾ ಸ್ಟಾರ್ ಪ್ರಸ್ತುತ ಪುಷ್ಪ 2 ಗಾಗಿ ಫಿಟ್‌ ಆಗಿದ್ದಾರೆ... ಈ ಚಿತ್ರದ ಮೂಲಕ ಅವರು ಆಸ್ಕರ್ ಪ್ರಶಸ್ತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ... 1000 ಕೋಟಿ ಕಲೆಕ್ಷನ್ ಮಾರ್ಕ್ ಟಾರ್ಗೆಟ್ ಹೊಂದಿರುವ ಚಿತ್ರತಂಡ ಬಹಳ ಎಚ್ಚರಿಕೆಯಿಂದ ಸಿನಿಮಾವನ್ನು ಶೂಟ್ ಮಾಡುತ್ತಿದೆ. ಸುಕುಮಾರ್ ಈ ಬಾರಿ ಯಾವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವುದನ್ನು ಕಾದು ನೋಡೋಣ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link