Make Up ಇಲ್ಲದೆ ಈ ರೀತಿ ಕಾಣ್ತಾಳೆ Pushpa ಚಿತ್ರದ ಶ್ರೀವಲ್ಲಿ, ಇಲ್ಲಿದೆ Rashmika Mandanna ಅಸಲಿ ಲುಕ್

Sun, 13 Mar 2022-6:53 pm,

1. ನಿಜವಾಗಲೂ ತುಂಬಾ ಮುದ್ದಾಗಿದ್ದಾಳೆ ರಾಷ್ಮಿಕಾ - ಈ ಚಿತ್ರಗಳನ್ನು ನೋಡಿದರೆ ರಶ್ಮಿಕಾ ನಿಜವಾಗಿಯೂ ತುಂಬಾ ಮುದ್ದಾಗಿದ್ದಾಳೆ ಎಂದು ನೀವೂ ಕೂಡ ಹೇಳಬಹುದು, ಅವರ ಮುದ್ದಾದ ಸ್ಮೈಲ್‌ ಇದ್ದರೆ, ಅವಳಿಗೆ ಯಾವುದೇ ಮೇಕ್ ಅಪ್ ನ ಅಗತ್ಯವಿಲ್ಲ ಎಂದು ನೀವೂ ಹೇಳಬಹುದು. ಅವಳ ನಗುವೇ ಅವಳ ಮೇಕಪ್.  

2. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯ - ರಷ್ಮಿಕಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗಿದ್ದು, ನಿತ್ಯ ತನ್ನ ಅಭಿಮಾನಿಗಳ ಜೊತೆಗೆ ಲೈವ್ ನಲ್ಲಿ ಮಾತುಕತೆ ಕೂಡ ನಡೆಸುತ್ತಾರೆ.  

3. ಯಾವುದೇ ಮೇಕ್ ಅಪ್ ಇಲ್ಲದೆ ಕಾನ್ಫಿಡೆಂಟ್ ಕಾಣುತ್ತಾರೆ ರಷ್ಮಿಕಾ - ಸಾಮಾಜಿಕ ಮಾಧ್ಯಮವೇ ಆಗಲಿ ಅಥವಾ ವೇದಿಕೆಯೇ ಆಗಲಿ, ಯಾವುದೇ ಮೇಕ್ ಅಪ್ ಇಲ್ಲದೆಯೇ ವೇದಿಕೆಯ ಮೇಲೆ ಆಗಮಿಸುವ ಕೆಲವೇ ಕೆಲವು ನಟಿ-ಮಣಿಯರಲ್ಲಿ ರಷ್ಮಿಕಾ ಕೂಡ ಒಬ್ಬರು. ಹೀಗಾಗಿ ಅವರನ್ನು ಹಲವು ಬಾರಿ ನೋ ಮೇಕ್ ಅಪ್ ಲುಕ್ ನಲ್ಲಿ ನೋಡಲಾಗಿದೆ.  

4. ರಷ್ಮಿಕಾ ಪಯಣ ಹೀಗಿದೆ - ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ದೇಶಾದ್ಯಂತ 'ಶ್ರೀವಲ್ಲಿ' ಎಂದೇ ಖ್ಯಾತಿ ಪಡೆದಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು ಜಾಹೀರಾತಿನಲ್ಲಿ ಮಾಡೆಲ್ ಆಗಿ ಕಾರ್ಯನಿರ್ವಹಿಸುವ ಮೂಲಕ ಆರಂಭಿಸಿದ್ದಾರೆ. ಇದಾದ ನಂತರ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ತನ್ನ ಚೊಚ್ಚಲ ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ ಹರ್ಷ್ ಅವರ 'ಅಂಜನಿ ಪುತ್ರ' ಪುನೀತ್ ರಾಜ್‌ಕುಮಾರ್ ಮತ್ತು ಗಣೇಶ್ ಜೊತೆ 'ಚಮಕ್' ಗೆ ಸಹಿ ಹಾಕಿದರು. ಮಹೇಶ್ ಬಾಬು ಜೊತೆಗಿನ 'ಸರಿಲೇರು ನೀಕೆವ್ವರು' ಚಿತ್ರದಲ್ಲಿಯೂ ಸಾಕಷ್ಟು ಪ್ರಶಂಸೆ ಗಳಿಸಿದ್ದಾಳೆ. ಅವರು ಕೊನೆಯದಾಗಿ ಅಲ್ಲು ಅರ್ಜುನ್ ಎದುರು ಸೂಪರ್‌ಹಿಟ್ 'ಪುಷ್ಪ: ದಿ ರೈಸ್' ನಲ್ಲಿ ಕಾಣಿಸಿಕೊಂಡಿದ್ದರು.  

5. ಬಾಲಿವುಡ್ ಗೆ ಡೆಬ್ಯೂ - ರಷ್ಮಿಕಾ ಶೀಘ್ರದಲ್ಲೇ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅವರು ಅಮಿತಾಬ್ ಬಚ್ಚನ್ ಜೊತೆ 'ಅಲ್ವಿದಾ' ಚಿತ್ರದಲ್ಲಿ ನಟಿಸಲಿದ್ದಾರೆ. ಇದನ್ನು ವಿಕಾಸ್ ಬಹ್ಲ್ ನಿರ್ದೇಶಿಸುತ್ತಿದ್ದು, ಏಕ್ತಾ ಕಪೂರ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. 'ಮಿಷನ್ ಮಜ್ನು' ನಂತರ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ರಶ್ಮಿಕಾ ಅವರ ಎರಡನೇ ಬಾಲಿವುಡ್ ಚಿತ್ರ 'ಅಲ್ವಿದಾ' ಆಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link