Bathing Tips: ಸ್ನಾನ ಮಾಡುವಾಗ ದೇಹದ ಈ ಭಾಗಕ್ಕೆ ಮೊದಲು ನೀರು ಹಾಕಿದ್ರೆ ನೋವು ನಿವಾರಣೆ, ಒತ್ತಡದಿಂದಲೂ ಮುಕ್ತಿ
ನಮ್ಮ ದೈನಂದಿನ ಜೀವನದಲ್ಲಿ ಸ್ನಾನ ಮಾಡುವುದು ಕೂಡ ಒಂದು ಪ್ರಮುಖ ದಿನಚರಿ ಆಗಿದೆ.
ನಿತ್ಯ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ರಕ್ಷಣೆ, ಕಾಂತಿಯುತ ಸುಂದರ ತ್ವಚೆ ಹೊಂಡಬಹುದು. ಅಷ್ಟೇ ಅಲ್ಲ, ಸ್ನಾನ ಮಾಡುವುದರಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಕೂಡ ಹೊಸ ಉಲ್ಲಾಸವನ್ನು ತುಂಬುತ್ತದೆ.
ಆಯುರ್ವೇದದ ಪ್ರಕಾರ, ನಿತ್ಯ ಬೆಳಿಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡುವುದರಿಂದ ಮನುಷ್ಯನಲ್ಲಿ ಸೋಮಾರಿತನ ದೂರವಾಗಿ ದೇಹದಲ್ಲಿ ಶಕ್ತಿ ವೃದ್ಧಿಯಾಗುತ್ತದೆ ಎನ್ನಲಾಗುವುದು.
ಆದಾಗ್ಯೂ, ಕೆಲವರಲ್ಲಿ ಸ್ನಾನ ಮಾಡಿದ ಬಳಿಕವೂ ತಾಜಾತನದ ಬದಲಿಗೆ ಆಲಸ್ಯ, ಸೋಮಾರಿತನವೇ ಕಾಣುತ್ತದೆ. ಇದಕ್ಕೆ ನೀವು ಸ್ನಾನ ಮಾಡುವ ರೀತಿಯೂ ಕಾರಣವಾಗಿರಬಹುದು.
ವಾಸ್ತವವಾಗಿ, ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವಾಗ ನೇರವಾಗಿ ಮೊದಲು ತಲೆಗೆ ನೀರು ಹಾಕುವುದರಿಂದ ಅದು ದೇಹದ ತಾಪಕ್ಕೆ ಹೊಂದಿಕೆಯಾಗುತ್ತದೋ ಇಲ್ಲವೋ ಎಂದು ತಿಳಿದಿರುವುದಿಲ್ಲ. ಅಷ್ಟೇ ಅಲ್ಲ, ಇದು ನಿಮ್ಮ ಮೆದುಳಿಗೂ ಹಾನಿಯುಂಟು ಮಾಡಬಹುದು. ಇದನ್ನು ತಪ್ಪಿಸಲು ಸರಿಯಾದ ಕ್ರಮದಲ್ಲಿ ಸ್ನಾನ ಮಾಡುವುದು ಮುಖ್ಯ.
ಆಯುರ್ವೇದದ ಪ್ರಕಾರ, ಸ್ನಾನ ಮಾಡುವಾಗ ಮೊದಲು ಭುಜದ ಭಾಗಕ್ಕೆ ನೀರು ಹಾಕಬೇಕು.
ಸ್ನಾನ ಮಾಡುವಾಗ ಮೊದಲು ಭುಜದ ಭಾಗಕ್ಕೆ ನೀರು ಹಾಕುವುದರಿಂದ ನೀರಿನ ತಾಪ ದೇಹಕ್ಕೆ ಸರಿಯಾಗಿದೆಯೋ/ಇಲ್ಲವೋ ಎಂದು ತಿಳಿಯುತ್ತದೆ. ಜೊತೆಗೆ ಇದು ದೇಹದ ಆಯಾಸ ಕಡಿಮೆ ಮಾಡಿ, ಮೈ-ಕೈ ನೋವು ಕಡಿಮೆಯಾಗಿ ಒತ್ತಡದಿಂದಲೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.