Chanakya Niti: ಮಡದಿಯಲ್ಲಿ ಈ ಗುಣಗಳಿದ್ದರೆ ಮಹಾಲಕ್ಷ್ಮಿಯೇ ಕೈಹಿಡಿಯುತ್ತಾಳೆ, ಜೀವನದಲ್ಲಿ ಸುಖಕ್ಕೆ ಕೊರತೆಯೇ ಇರಲ್ಲ!
ಚಾಣಕ್ಯ ನೀತಿಯಲ್ಲಿ ಸುಖ-ದಾಂಪತ್ಯಕ್ಕೆ ಹಲವು ಸಲಹೆಗಳನ್ನು ನೀಡಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಮನೆಯ ಗೃಹಿಣಿಯಲ್ಲಿ 'ಮೂರು' ಮುಖ್ಯ ಗುಣಗಳಿದ್ದರೆ ಅಂತಹ ಪತಿಯೇ ಪುಣ್ಯವಂತ ಎನ್ನಲಾಗುತ್ತದೆ.
ಗೃಹಿಣಿ ಮನೆಯ ಕಣ್ಣು. ಮದುವೆಯಾಗಿ ಅತ್ತೆ ಮನೆಗೆ ಮನೆಗೆ ಬರುವ ಹೆಣ್ಣಿನಲ್ಲಿ ಕೆಲವು ಗುಣಗಳಿದ್ದರೆ ಅಂತಹ ಆ ಹೆಣ್ಣನ್ನು ಮದುವೆಯಾದ ಹುಡುಗನಷ್ಟು ಅದೃಷ್ಟವಂತರು ಬೇರಾರು ಇರುವುದಿಲ್ಲ.
ಮಡದಿಯ ಗುಣ ಶುದ್ಧ ಮತ್ತು ನೈತಿಕವಾಗಿದ್ದರೆ ಆಕೆಯ ನಡವಳಿಕೆಯಿಂದ ಗಂಡನ ಮನೆಯವರ ಗೌರವ ಕೀರ್ತಿ ಹೆಚ್ಚಾಗುತ್ತದೆ.
ಹೆಣ್ಣಿಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಮತ್ತು ಸಹನೆ ಇರುವ ಹೆಣ್ಣು ಮಕ್ಕಳು ಮನೆಯಲ್ಲಿ ಜಗಳವನ್ನು ತಪ್ಪಿಸುತ್ತಾರೆ. ಘರ್ಷಣೆಗಳನ್ನು ಕಡಿಮೆ ಮಾಡಿ ಮನೆಯಲ್ಲಿ ಶಾಂತಿ ಕಾಪಾಡುತ್ತಾರೆ.
ಮನೆಯಲ್ಲಿ ಹೆಣ್ಣು ಬುದ್ದಿವಂತಿಕೆಯಿಂದ ಇದ್ದು ಕುಟುಂಬದ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವವಳಾಗಿದ್ದರೆ ಜೀವನದಲ್ಲಿ ಸಮಸ್ಯೆ ಎಂತದ್ದೇ ಇದ್ದರೂ ಕುಟುಂಬವು ಸಂತೋಷದಿಂದ ಇರುತ್ತದೆ.
ಮಡದಿಯಲ್ಲಿ ಈ ಮೂರು ಮುತ್ತಿನಂತ ಗುಣಗಳಿದ್ದರೆ ಅಂತಹ ಹೆಣ್ಣನ್ನು ಜೀವನ ಸಂಗಾತಿಯಾಗಿ ಪಡೆದಿರುವ ಪುರುಷನೇ ಅದೃಷ್ಟವಂತ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.