International Tea Day: ಮಧುಮೇಹ ನಿಯಂತ್ರಣಕ್ಕೆ ಚಮತ್ಕಾರಿ ಚಹಾಗಳಿವು
ಸಾರ್ವಕಾಲಿಕವಾಗಿ ಹೆಚ್ಚು ಬೇಡಿಕೆಯಲ್ಲಿರುವ ಪಾನೀಯ ಎಂದರೆ ಚಹಾ. ಪ್ರತಿ ವರ್ಷ ಮೇ 21ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ನೀರಿನ ಬಳಿಕ ಅತಿ ಹೆಚ್ಚು ಸೇವಿಸುವ ಪಾನೀಯ ಎಂದರೆ ಚಹಾ.
ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಕೆಲವು ಚಹಾಗಳು ತುಂಬಾ ಪ್ರಯೋಜನಕಾರಿ ಆಗಿವೆ. ಹಾಗಿದ್ದರೆ, ಈ ಅಂತಾರಾಷ್ಟ್ರೀಯ ಚಹಾ ದಿನದಂದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾದ ಐದು ಚಹಾಗಳ ಬಗ್ಗೆ ತಿಳಿಯೋಣ.
ತೂಕ ಇಳಿಕೆಯಲ್ಲಿ ವರದಾನದಂತೆ ಪರಿಗಣಿಸಲಾಗಿರುವ ಗ್ರೀನ್ ಟೀ ಸೇವನೆಯು ಮಧುಮೇಹಿಗಳಿಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಟೈಪ್ 2 ಡಯಾಬಿಟಿಸ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಆರೋಗ್ಯ ತಜ್ಞರ ಪ್ರಕಾರ, ಬ್ಲಾಕ್ ಟೀ ಮಧುಮೇಹಿ ಸ್ನೇಹಿ ಚಹಾ ಎಂದು ಪರಿಗಣಿಸಲಾಗಿದೇ. ಬ್ಲಾಕ್ ಟೀ ಸೇವನೆಯು ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಎನ್ನಲಾಗಿದೆ.
ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಒದಗಿಸಬಲ್ಲ ಶುಂಠಿಯಿಂದ ತಯಾರಿಸಿದ ಟೀ ಸೇವನೆಯು ಮಧುಮೇಹಿಗಳಿಗೆ ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿದೆ ಎಂದು ಕೆಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ.
ಹೈಬಿಸ್ಕಸ್ ಟೀ ಎಂದರೆ ದಾಸವಾಳದ ಹೂಗಳಿಂದ ತಯಾರಿಸಿದ ಚಹಾ ಸೇವನೆಯು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ. ಮಾತ್ರವಲ್ಲ, ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ ಎಂದು ಹೇಳಲಾಗುತ್ತದೆ.
ಪುದೀನಾ ಟೀ ಕುಡಿಯುವುದರಿಂದ ಇದರ ಸುವಾಸನೆಯು ಇಂಟ್ರಾವೆನಸ್ ಕ್ಯಾತಿಟೆರೈಸೇಶನ್‌ನಿಂದ ಉಂಟಾಗುವ ನೋವು ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ಬ್ಲಡ್ ಶುಗರ್ ನಿಯಂತ್ರಣಕ್ಕೂ ಪರಿಣಾಮಕಾರಿ ಎಂದು ಕೆಲವು ಸಂಶೋಧಕರು ಕಂಡು ಕೊಂಡಿದ್ದಾರೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.