`ಅವಮಾನ ತಾಳಲಾರದೆ ನನ್ನ ಮಗ ನಿವೃತ್ತಿ ಪಡೆದ` ಕ್ರಿಕೆಟ್‌ಗೆ ಗುಡ್‌ ಬೈ ಹೇಳುತ್ತಿದ್ದಂತೆ ಆರ್‌. ಅಶ್ವಿನ್‌ ತಂದೆ ಸಂಚಲನದ ಹೇಳಿಕೆ!

Sat, 21 Dec 2024-10:57 am,

R Ashwin: ಟೀಂ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರು ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ. ಇದರ ಬೆನ್ನಲ್ಲೆ ಅವರ ತಂದೆಯವರು ಮಾಡಿರುವ ಕಾಮೆಂಟ್‌ ಕ್ರಿಕೆಟ್‌ ಜಗತ್ತಿನಲ್ಲಿ ಸಂಚಲನವನ್ನು ಸೃಷ್ಟಿಸಿಬಿಟ್ಟಿದೆ. ಅಷ್ಟಕ್ಕೂ ರವಿಚಂದ್ರನ್‌ ಅಶ್ವಿನ್‌ ಅವರ ತಂದೆ ಮಾಡಿದ ಕಾಮೆಂಟ್‌ ಆದ್ರೂ ಏನು..? ತಿಳಿಯಲು ಮುಂದೆ ಓದಿ...  

ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಅಂಗವಾಗಿ ಗಬ್ಬಾದಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.  

ಇನ್ನೂ, ಬುಧವಾರ ಆರ್‌ ಅಶ್ವಿನ್‌ ಅವರು ಭಾರತಕ್ಕೆ ತಲುಪಿದ್ದು, ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಆರ್‌ ಅಶ್ವಿನ್‌ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.   

ಮಗ ನಿವೃತ್ತಿ ಘೋಷಿಸಿ ಮನೆಗೆ ಹಿಂತಿರುಗುತ್ತಿದ್ದಂತೆ ಅವರನ್ನು ಆಹ್ವಾನಿಸಿದ ಅವರ ತಂದೆ ಮಗನನ್ನು ನೋಡುತ್ತಿದ್ದಂತೆ ಭಾವುಕರಾದರೂ. ಇದರ ನಂತರ ಮಾಧ್ಯಮಗಳೊಂದಿಗೂ ಸಹ ಅವರು ಮಾತನಾಡಿದರು.  

ಮಾಧ್ಯಮಗಳೊಂದಿಗೆ ಮಾತನಡಿದ ಆರ್‌ ಅಶ್ವಿನ್‌ ಅವರ ತಂದೆ ʻನನ್ನ ಮಗ ಅವಮಾನಗಳನ್ನು ಎದುರಿಸಿದ್ದಾರೆ. ಅದರಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಹಠಾತ್ ನಿರ್ಧಾರದ ಹಿಂದೆ ಹಲವು ಕಾರಣಗಳಿವೆ ಎಂದು ನಾನು ಭಾವಿಸುತ್ತೇನೆ. ಅಶ್ವಿನ್ ನಿವೃತ್ತಿ ಘೋಷಣೆ ಆಘಾತ ತಂದಿದೆ. ಅಶ್ವಿನ್ ನಿವೃತ್ತಿ ಘೋಷಿಸುವವರೆಗೂ ನನಗೂ ಗೊತ್ತಿರಲಿಲ್ಲ.ʼ   

ʻಅವರ ನಿರ್ಧಾರಕ್ಕೆ ನನ್ನ ಸಹಮತವಿದೆ. ಅಶ್ವಿನ್ ಗೆ ವಿದಾಯ ಹೇಳಿ ಅರ್ಧ ಖುಷಿ.. ಅರ್ಧ ದುಃಖ ಇದೆ. ನಿವೃತ್ತಿ ಅವರ ವೈಯಕ್ತಿಕ ನಿರ್ಧಾರ. ಅದರಲ್ಲಿ ನಾನು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಶ್ವಿನ್ ಅವರ ನಿವೃತ್ತಿ ನಮ್ಮ ಕುಟುಂಬಕ್ಕೆ ಭಾವನಾತ್ಮಕ ಕ್ಷಣವಾಗಿದೆ.ʼ ಎಂದಿದ್ದಾರೆ.  

ಇನ್ನೂ, ತಂದೆ ಹೇಳಿದ ಈ ಹೇಳಿಕೆ ಕುರಿತು ಅಶ್ವಿನ್‌ ಅವರು ಟ್ವೀಟ್‌ ಮೂಲಕ ರಿಯಾಕ್ಷನ್‌ ಕೊಟ್ಟಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link