ಮೈದಾನದಲ್ಲಿ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆಯುತ್ತಿರುವ ರಚಿನ್ ಲವ್ ಸ್ಟೋರಿ ಕೂಡಾ ಸಖತ್ ಫೇಮಸ್!ಇವರ ಮನಸ್ಸು ಕದ್ದ ಕನ್ನಡತಿ ಯಾರು ಗೊತ್ತಾ !
ರಚಿನ್ ರವೀಂದ್ರ ಬಗ್ಗೆ ಅವರ ಆಟದ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ರಚಿನ್ ಅವರ ವೃತ್ತಿ ಬದುಕಿನಂತೆ ಅವರ ವೈಯಕ್ತಿಕ ಜೀವನ ಕೂಡಾ ಕಲರ್ ಫುಲ್ ಆಗಿದೆ.
ರಚಿನ್ ಪ್ರೀತಿಸುತ್ತಿರುವ ಹುಡುಗಿಯ ಹೆಸರು ಪ್ರೇಮಿಳಾ ಮೊರಾರ್. ಇವರು ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್. ಫ್ಯಾಷನ್ ಜಗತ್ತಿನಲ್ಲಿ ಖ್ಯಾತಿ ಹೊಂದಿದ್ದಾರೆ. ಪ್ರೇಮಿಳಾ ನ್ಯೂಜಿಲೆಂಡ್‌ನ ಆಕ್ಲೆಂಡ್ ಮತ್ತು ವೆಲ್ಲಿಂಗ್‌ಟನ್ ನಿವಾಸಿ.
ರಚಿನ್ ರವೀಂದ್ರ ಮತ್ತು ಪ್ರೇಮಿಳಾ ಮೊರಾರ್ ಕಳೆದ ಎರಡು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಪ್ರೇಮಿಳಾ ಮೊರಾರ್ ಇವರಿಬ್ಬರ ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶೇರ್ ಮಾಡುತ್ತಾ ಇರುತ್ತಾರೆ.
ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಇರದಿದ್ದರೂ ರಚಿನ್ ರವೀಂದ್ರ ಜೊತೆಗೆ ಡೇಟಿಂಗ್ ಪ್ರಾರಂಭಿಸಿದ ಬಳಿಕ ಇವರು ಕ್ರಿಕೆಟ್ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡರಂತೆ.
ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಳ್ಳುವ ಮೊರಾರ್ ಸಾಮಾಜಿಕ ಮಾಧ್ಯಮಗಳಲ್ಲಿ ರಚಿನ್ ಅವರ ಯಶಸ್ಸನ್ನು ಸಂಭ್ರಮಿಸುತ್ತಾರೆ. ಪ್ರತಿ ಹಂತದಲ್ಲಿಯೂ ರಚಿನ್ ಗೆ ಪ್ರೋತ್ಸಾಹದ ಚಿಲುಮೆಯಾಗಿ ಕಾಣಿಸಿಕೊಂಡಿದ್ದಾರೆ.
Instagram ನಲ್ಲಿ ರಚಿನ್ ರವೀಂದ್ರ ಮತ್ತು ಪ್ರೇಮಿಳಾ ಮೊರಾರ್ ಅವರ ಫೋಟೋಗಳನ್ನು ಅಭಿಮಾನಿಗಳು ಕೂಡಾ ಬಹಳವಾಗಿ ಮೆಚ್ಚುತ್ತಿದ್ದಾರೆ.ಇವರಿಬ್ಬರೂ ತಮ್ಮ ವೆಕೇಶನ್ ಮತ್ತು ಡೇಟ್ ನೈಟ್ ಫೋಟೋಗಳನ್ನೂ ಶೇರ್ ಮಾಡುತ್ತಿರುತ್ತಾರೆ.
ರಚಿನ್ ಭಾರತೀಯ ಮೂಲದವರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮೂಲಗಳ ಪ್ರಕಾರ ಅವರ ಗೆಳತಿ ಪ್ರೇಮಿಳಾ ಪೋಷಕರು ಕೂಡಾ ಭಾರತೀಯ ಮೂಲದವರು ಎಂದೇ ಹೇಳಲಾಗುತ್ತಿದೆ.