Rachitha Ram: ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಸ್ವಿಸ್ ಟ್ರಡಿಷನಲ್ ಡ್ರೆಸ್ ಧರಿಸಿ ಕುಣಿದು ಕುಪ್ಪಳಿಸಿದ ಡಿಂಪಲ್ ಕ್ವೀನ್!
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್, ಇತ್ತೀಚೆಗೆ ಸಿನಿಮಾ ಮಧ್ಯೆ ಬ್ರೇಕ್ ತೆಗೆದುಕೊಂಡು ಫಾರಿನ್ ಟ್ರಿಪ್ ಹೋಗಿದ್ದಾರೆ.
ನಟಿ ರಚಿತಾ ರಾಮ್ ಕಳೆದ ಮೂರು ದಿನಗಳಿಂದ ತಾವು ಫಾರಿನ್‌ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದು, ವಿವಿಧ ಕ್ಯಾಪ್ಸನ್ ನೀಡುತ್ತಾ, ಬದುಕನ್ನು ಸಂಭ್ರಮಿಸಬೇಕು ಎಂದು ಬರೆದುಕೊಂಡಿದ್ದಾರೆ.
ಡಿಂಪಲ್ ಕ್ವೀನ್ ತಾವು ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಏಂಜಾಯ್ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದು, ಸ್ವಿಡ್ಜರ್ ಲ್ಯಾಂಡ್‌ನ ಬೀದಿಯಲ್ಲಿ ಕೈ ತುಂಬಾ ಹೂವಿನ ಬೊಕ್ಕೆ ಹಿಡಿದು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.
ನಟಿ ರಚಿತಾ 'ಹಸ್ತಿ ರಹೋ ತುಮ್ ಹಸ್ತಿ ರಹೋ' ಹಾಡಿನ ಬಿಜಿಎಂಗೆ ಸಕತ್ ಸ್ಟೆಪ್ ಹಾಕಿದ್ದು, ಅಲ್ಲಿದ್ದ ಸ್ಥಳೀಯರು ಅವರ ಡ್ಯಾನ್ಸ್ ನೋಡಿ ಮನಸೋತಂತೆ ಕಾಣಿಸಿಸುತ್ತಿತ್ತು.
ನಟಿ ರಚಿತಾ ರಾಮ್ ಮತ್ತೊಂದು ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಸ್ವಿಡ್ಜರ್ ಲ್ಯಾಂಡ್‌ನ ಟ್ರಡಿಷನಲ್ ಡ್ರೆಸ್ ಸ್ವಿಸ್ ಉಡುಪಿನಲ್ಲಿ ಕಾಣಿಸಿಕೊಂಡು, ಅದನ್ನು ಸ್ವಿಸ್ ಡ್ರಿಂಡಲ್ ಡ್ರೆಸ್ ಎಂದು ಕರೆಯಲಾಗುತ್ತದೆ ಎಂದು ಹೇಳಿಕೊಂಡು, ಈ ಬಟ್ಟೆ ಧರಿಸಿ ಮಂಜು ತುಂಬಿದ ಪ್ರದೇಶದಲ್ಲಿ ಸಕತ್ ಫೋಸ್ ನೀಡಿದ್ದಾರೆ.
ನಟಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಈ ವರ್ಷ ಕ್ರಾಂತಿ, ವೀರಂ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಮುಂದಿನ ವರ್ಷ ಡಿಂಪಲ್ ಕ್ವೀನ್ ಮ್ಯಾಟನಿ, ಶಬರಿ ರೀಚಿಂಗ್ ರಾವಣ, ಲವ್ ಮಿ ಆರ್ ಹೇಟ್ ಮಿ ಮತ್ತು ಸಂಜು ವೆಡ್ಸ್ ಗೀತಾ ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ.