ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಇವರೇ... ಅತ್ತೆ ಮನೆಯಲ್ಲಿ ಹಿಂಸೆ, ಮುರಿದುಬಿದ್ದ ಎರಡನೇ ಮದುವೆ!!
)
ರಾಧಿಕಾ ಕುಮಾರಸ್ವಾಮಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ತುಳು ಮೂಲದ ರತನ್ ಕುಮಾರ್ ಎಂಬವರೊಂದಿಗೆ 26 ನವೆಂಬರ್ 2000ದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಎನ್ನಲಾಗುತ್ತದೆ.
)
ಮದುವೆ ಬಳಿಕ ಒಂದೂವರೆ ವರ್ಷದಲ್ಲೇ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ರತನ್ ಕುಮಾರ್ ಅಪಘಾತದಲ್ಲಿ ನಿಧನರಾದರಂತೆ ಎನ್ನಲಾಗಿದೆ.
)
ಅತ್ತೆ ಮನೆಯಲ್ಲಿ ಸಾಕಷ್ಟು ಸಂಕಟ, ನೋವು ಹಾಗೂ ಹಿಂಸೆಯನ್ನು ರಾಧಿಕಾ ಅನುಭವಿಸಿದ್ದಾರೆ. ಈ ನೋವಿನಿಂದಲೇ ಸಾಧನೆ ಮಾಡಬೇಕೆಂದು ಹಠ ಹಿಡಿದು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರಂತೆ.
ಸೃಜನ್ ಲೋಕೇಶ್ ಅವರ 'ನೀಲ ಮೇಘ ಶ್ಯಾಮ' ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಮೊದಲು ನಟಿಸಿದರು. ನಟ ವಿಜಯರಾಘವೇಂದ್ರ ನಟನೆಯ 'ನಿನಗಾಗಿ' ಸಿನಿಮಾ ರಾಧಿಕಾ ಕುಮಾರಸ್ವಾಮಿಗೆ ಹಿಟ್ ನೀಡಿತು.
ನಿರ್ಮಾಪಕರಾಗಿರುವ ರಾಜ್ಯದ ಮಾಜಿ ಸಿಎಂ ಒಬ್ಬರು ರಾಧಿಕಾ ಅವರನ್ನು ಮದುವೆ ಆದರು. ಇವರೇ ಅವರ ಎರಡನೇ ಪತಿ. ಈ ಮದುವೆ ಕೂಡ ಅರ್ಧಕ್ಕೆ ಮುರಿದು ಬಿದ್ದಿತು.
ನಟಿ ರಾಧಿಕಾ ಅಣ್ಣ ತಂಗಿ, ತವರಿಗೆ ಬಾ ತಂಗಿ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ಜೊತೆ ನಟಿಸಿದ್ದು, ಸೂಪರ್ ಹಿಟ್ ಆದವು. ದರ್ಶನ್, ಉಪೇಂದ್ರ ಹೀಗೆ ಕನ್ನಡದ ಸ್ಟಾರ್ ನಟರ ಜೊತೆ ರಾಧಿಕಾ ಸಿನಿಮಾ ಮಾಡಿದ್ದಾರೆ.
ತೆಲುಗು ಚಿತ್ರಗಳಲ್ಲಿಯೂ ನಟಿ ರಾಧಿಕಾ ಅಭಿನಯಿಸಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಸಕ್ರಿಯರಾಗಿದ್ದಾರೆ.