ರಾಜಕುವರಿಯಂತೆ ಕಂಗೊಳಿಸಿದ ರಾಧಿಕಾ ಮರ್ಚೆಂಟ್‌..! ದೇವತೆ ಧರೆಗಿಳಿದು ಬಂದಳು ಎಂದ ನೆಟ್ಟಿಗರು

Thu, 04 Jul 2024-10:21 am,

ಶೀಘ್ರವೇ ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜುಲೈ 12 ರಂದು ಈ ಜೋಡಿಯ ಮದುವೆ ನಡೆಯಲಿದ್ದು, ಮದುವೆಗೂ ಮುನ್ನ ಅಂಬಾನಿ ಕುಟುಂಬ ಎರಡು ಅದ್ದೂರಿ ಪೂರ್ವ ವಿವಾಹ ಸಮಾರಂಭಗಳನ್ನು ಆಯೋಜಿಸಿತ್ತು.   

ಬುಧವಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದ ಅಂಗವಾಗಿ ಮಾಮೇರು ವಿಧಿವಿಧಾನ ನಡೆಯಿತು. ಇದು ಗುಜರಾತಿನ ವಿಶಿಷ್ಟ ಸಂಪ್ರದಾಯ. ಮಾಮೇರು ಎಂದರೆ ಗುಜರಾತಿ ಭಾಷೆಯಲ್ಲಿ ಅಂಕಲ್ ಎಂದರ್ಥ. ಈ ಸಂಪ್ರದಾಯದ ಪ್ರಕಾರ, ವಧುವಿನ ಚಿಕ್ಕಪ್ಪ ಮುದುಮಗಳಿಗೆ ಮದುವೆಯ ಉಡುಗೊರೆಗಳನ್ನು ನೀಡುತ್ತಾರೆ.    

ಬುಧವಾರ ಮಧ್ಯಾಹ್ನ, ವಧು ರಾಧಿಕಾ ಮರ್ಚೆಂಟ್ ಚಿನ್ನದಾಭರಣದೊಂದಿಗೆ ಅಲಂಕರಣಗಳೊಂದಿಗೆ ಅದ್ಭುತವಾದ ಕಿತ್ತಳೆ ಮತ್ತು ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿ ಎಲ್ಲರ ಕಣ್ಮನ ಸೆಳೆದರು.   

ಮುಕೇಶ್ ಅಂಬಾನಿ ಪುತ್ರಿ ಮತ್ತು ವರ ಅನಂತ್ ಅಂಬಾನಿ ಸಹೋದರಿ ಇಶಾ ಅಂಬಾನಿ ತಮ್ಮ ಪತಿ ಆನಂದ್ ಪಿರಮಾಲ್ ಮತ್ತು ಮಕ್ಕಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು. ಗೋಲ್ಡನ್ ಝರಿ ಮತ್ತು ಗೋಲ್ಡನ್ ಥ್ರೆಡ್ ವರ್ಕ್ ವಿನ್ಯಸವುಳ್ಳ ಕಿತ್ತಳೆ ಬಣ್ಣದ ರೇಷ್ಮೆ ಸೀರೆಯಲ್ಲಿ ಇಶಾ ಸುಂದರವಾಗಿ ಕಂಡರು.   

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಬಾಲ್ಯದ ಸ್ನೇಹಿತರಾಗಿದ್ದು, ಇ ಜೋಡಿಯ ಅದ್ದೂರಿ ಮದುವೆ ಸಾಮಾರಂಭ ಜುಲೈ 12 ರಂದು ನಡೆಯಲಿದೆ .   

ZEENEWS TRENDING STORIES

By continuing to use the site, you agree to the use of cookies. You can find out more by Tapping this link