Radhika Pandit: ವ್ಯಾಲೆಂಟೈನ್ಸ್ ದಿನಕ್ಕೆ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಸಾಥ್‌!

Fri, 02 Feb 2024-10:49 am,

ಚಂದನವನದ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರೂ, ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ರಾಧಿಕಾ ಪಂಡಿತ್ ನಿನ್ನೆ ಫೆಬ್ರವರಿ 1  ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರಾಧಿಕಾ ಪಂಡಿತ್ ಪ್ರೇಮಿಗಳ ದಿನವನ್ನು ನೆನಪಿಸಿಕೊಂಡಂತಿದ್ದು, ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡು "ಪ್ರೇಮಿಗಳ ಮಾಸಕ್ಕೆ ಹಲೋ " ಎಂದು ಬರೆದುಕೊಂಡಿದ್ದಾರೆ.

ಸದ್ಯ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿರುವ ಫೋಟೊಗಳಿಗೆ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದು, ಒಬ್ಬರು "ರಾಧೆ ಓ ರಾಧೆ ನಿನ್ನ ನೋಡಲು ಕಾದೆ. ನನ್ ಪೇಜ್ ಒಮ್ಮೆ ನೋಡ ಬಾರದೆ. ನೋಡಿ ಪೋಸ್ಟ್ ಲ್ಲೈಕ್ ಮಾಡಬಾರದೆ.. ಪ್ಲೀಸ್ ರಾಧೆ" ಎಂತ ಒಬ್ಬರು ಕಮೆಂಟ್ ಮಾಡಿದ್ದಾರೆ.

ರಾಧಿಕಾ ಪೋಸ್ಟ್‌ಗೆ ಕಮೆಂಟ್‌ ವಿಭಾಗದಲ್ಲಿ ಇನ್ನೊಬ್ಬರು "ಯಾರಿಲ್ಲ ಯಾರಿಲ್ಲ.. ನಿನ್ನಂತೆ ಯಾರಿಲ್ಲ.. ನಿನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲ." ಹೇಳಿದ್ದರೇ, ಮತ್ತೊಬ್ಬರು "ರಾಧೆ ಓ ರಾಧೆ ನಿಮಗಾಗಿ ಕಾದೆ.. ನೀವೊಮ್ಮೆ ಕಮೆಂಟ್‌ನ ನೋಡಬಾರದೆ, ನೋಡಿ ರಿಪ್ಲೈ ಮಾಡಬಾರದೇ" ಎಂದೆಲ್ಲ ಸಂದೇಶ ಕಳುಹಿಸಿದ್ದಾರೆ.

ರಾಧಿಕಾ ಪಂಡಿತ್ ಶೇರ್‌ ಮಾಡಿರುವ ಫೋಟೋಗಳು ವೈರಲ್‌ ಆಗುತ್ತಿದ್ದಂತೆ, ಈ ನಟಿಯ ಕಮ್‌ಬ್ಯಾಕ್ ಬಗ್ಗೆನೂ ಅಭಿಮಾನಿಗಳು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. 

ನಟಿ ರಾಧಿಕಾ ಪಂಡಿತ್‌ ಇದೂವರೆಗೂ 21 ಚಿತ್ರಗಳಲ್ಲಿ ಅಭಿನಯಿಸಿದ್ದು, ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಅದ್ಧೂರಿ, ಕಡ್ಡಿಪುಡಿ, ಬಹದ್ದೂರು, ಮಿಸ್ಟರ್ ಅಂಡ್ ಮಿಸ್ಸಸ್ ರಾಮಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ 2019ರಲ್ಲಿ ತೆರೆಕಂಡಿದ್ದ 'ಆದಿ ಲಕ್ಷ್ಮಿ ಪುರಾಣ' ಸಿನಿಮಾವೇ ಕೊನೆಯದಾಗಿ ಕಾಣಿಸಿಕೊಂಡಿದ್ದು, ಆ ಚಿತ್ರದ ಬಳಿಕಮತ್ತೆ ಬಣ್ಣ ಹಚ್ಚಿಲ್ಲ. ಹೀಗಾಗಿ ಮತ್ತೆ ಸಿನಿಮಾಗಳಿಗೆ ಕಮ್‌ಬ್ಯಾಕ್ ಮಾಡಬೇಕು ಅನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link