ಮೂಲಂಗಿ ಎಲೆಗಳನ್ನು ಹೀಗೆ ಸೇವಿಸಿದರೆ ಚಳಿಗಾಲದ ಈ ಸಮಸ್ಯೆಗಳು ದೂರವಾಗುತ್ತವೆ!
ಚಳಿಗಾಲದಲ್ಲಿ ಸಿಗುವ ಮೂಲಂಗಿಯನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಕೆಲವರು ಮೂಲಂಗಿ ತಿಂದು ಸೊಪ್ಪು ಬಿಸಾಡುತ್ತಾರೆ. ಮೂಲಂಗಿ ಎಲೆಯಿಂದ ಸಲಾಡ್, ಸಾಂಬಾರ್ ಮಾಡಬಹುದು. ಆದರೆ ಮೂಲಂಗಿ ಎಲೆಯನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳೂ ಇವೆ.
ಮೂಲಂಗಿ ಎಲೆಗಳು ಪೋಷಕಾಂಶಗಳ ಶಕ್ತಿಕೇಂದ್ರವಿದ್ದಂತೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಈ ಎಲೆಯು ವಿಟಮಿನ್ ಸಿ, ಕೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಫೋಲೇಟ್‌ನಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ.
ಮೂಲಂಗಿ ಎಲೆಗಳನ್ನು ಸೇವಿಸುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ ಉಪಯುಕ್ತವಾಗಿದೆ. ಮಧುಮೇಹಿಗಳಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ದೇಹದಲ್ಲಿ ರಕ್ತವನ್ನು ಶುದ್ಧವಾಗಿಡಲು ಮೂಲಂಗಿ ಎಲೆಗಳು ಉಪಯುಕ್ತವಾಗಿವೆ. ಮೂಲಂಗಿ ಎಲೆಗಳಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಚರ್ಮ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಮೂಲಂಗಿ ಎಲೆಗಳನ್ನು ಸೇವಿಸುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಮೂಲಂಗಿ ಎಲೆಗಳು ಪೈಲ್ಸ್ ನಿಂದ ಬಳಲುತ್ತಿರುವವರಿಗೆ ವರದಾನ ಎಂದು ಹೇಳಬಹುದು.
ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಮೂಲಂಗಿ ಎಲೆಗಳು ತುಂಬಾ ಉಪಯುಕ್ತವಾಗಿವೆ. ಇದರಲ್ಲಿರುವ ಸೋಡಿಯಂ ರಕ್ತದೊತ್ತಡವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಮೂಲಂಗಿ ಎಲೆಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.