ಹೊಗೆನಕಲ್ ನಲ್ಲಿ ತೆಪ್ಪ ರೇಸ್... ಗೆದ್ದಾತನಿಗೆ 4 ಗ್ರಾಂ ಬಂಗಾರ ಬಹುಮಾನ

Fri, 09 Jun 2023-12:11 pm,

ಚಾಮರಾಜನಗರ: ಭಾರತದ ನಯಾಗರ ಎಂದೇ ಪ್ರಸಿದ್ಧವಾಗಿರುವ ಕರ್ನಾಟಕ ಹಾಗೂ ತಮಿಳು‌ನಾಡಿನ ಎರಡೂ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ  ಹನೂರು ತಾಲೂಕಿನ ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ತೆಪ್ಪಗಳ ರೇಸ್ ನಡೆದಿದೆ. 

ಭೋರ್ಗರೆದು ಉಕ್ಕಿ ಹರಿಯುವ ಕಾವೇರಿಯಲ್ಲಿ ರೋಮಾಂಚಕ ರೇಸ್ ನಡೆದಿದೆ.

ಊಟುಮಲೈ ಎಂಬ ಗ್ರಾಮಸ್ಥರು ಮಾರಿಯಮ್ಮನ ಹಬ್ಬದ ಪ್ರಯುಕ್ತ ಈ ರೇಸ್ ನಡೆಸಿದ್ದಾರೆ.

ಭೋರ್ಗರೆದು ಉಕ್ಕಿ ಹರಿಯುವ  ಜಲಪಾತದ ಹಿನ್ನೀರಿನಲ್ಲಿ ನಡೆದ ಈ ತೆಪ್ಪಗಳ ರೇಸ್ ನಲ್ಲಿ 8-10 ತೆಪ್ಪಗಳು  ಭಾಗಿಯಾಗಿವೆ. ಒಂದು ತೆಪ್ಪದಲ್ಲಿ ಇಬ್ಬರು ಕುಳಿತು 100 ಮೀ ರೇಸ್ ನಡೆದಿದ್ದು ಗೆದ್ದವರಿಗೆ ಚಿನ್ನಾಭರಣವನ್ನು ಬಹುಮಾನವಾಗಿ ಕೊಡಲಾಗಿದೆ. 

ಮೊದಲ ಬಹುಮಾನವನ್ನು ಪೆರುಮಾಳ್- ಮಯಿಲ್, ಎರಡನೇ ಬಹುಮಾನವಾದ 2 ಗ್ರಾಂ ಚಿನ್ನವನ್ನು  ಶ್ರೀನಿ- ಪೆರುಮಾಳ್ ಹಾಗೂ 3 ನೇ ಬಹುಮಾನವಾದ 8 ಸಾವಿರ ಹಣವನ್ನು ಸತೀಶ್- ಕರುಪ್ಪನ್ ಎಂಬವರು ಪಡೆದಿದ್ದಾರೆ‌‌. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link