ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!
ಟಿ20 ವಿಶ್ವಕಪ್ 2024ರ ಟ್ರೋಫಿ ಗೆದ್ದಿರುವ ಭಾರತ ಸದ್ಯ ಜಗತ್ತಿನ ಗಮನ ಸೆಳೆದಿದೆ. 17 ವರ್ಷಗಳ ಟಿ20 ಟ್ರೋಫಿ ಬರವನ್ನು ಟೀಂ ಇಂಡಿಯಾ ಕೊನೆಗೊಳಿಸಿದೆ. ಈ ಬೆನ್ನಲ್ಲೇ ಭಾರತದ ನಾಲ್ವರು ದಿಗ್ಗಜರು ಟಿ20 ಕ್ರಿಕೆಟ್’ಗೆ ವಿದಾಯ ಘೋಷಣೆ ಮಾಡಿದ್ದಾರೆ.
ಅಂದಹಾಗೆ ನಾವಿಂದು ಈ ವರದಿಯಲ್ಲಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಯಶಸ್ಸಿನ ಹಿಂದಿರುವ ಓರ್ವ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ರಘು ರಾಘವೇಂದ್ರ… ಈ ವ್ಯಕ್ತಿ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಇವರು ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ. ಕಳೆದ ಹಲವು ವರ್ಷಗಳಿಂದ ಟೀಂ ಇಂಡಿಯಾಗಾಗಿ ಸೇವೆ ನೀಡುತ್ತಿದ್ದಾರೆ.
ಟೀಂ ಇಂಡಿಯಾದಲ್ಲಿ ರಘು ರಾಘವೇಂದ್ರ ಅವರ ನಿಜವಾದ ಪಾತ್ರವೆಂದರೆ ಥ್ರೋ ಡೌನ್ ಸ್ಪೆಷಲಿಸ್ಟ್. ಅಭ್ಯಾಸದ ಅವಧಿಯಲ್ಲಿ, ಆಟಗಾರರಿಗೆ ನೆಟ್ಸ್’ನಲ್ಲಿ ಚೆಂಡನ್ನು ಎಸೆಯುವ ಮೂಲಕ ಅಭ್ಯಾಸ ಮಾಡಿಸುತ್ತಾರೆ. ಟೀಮ್ ಇಂಡಿಯಾದ ಪ್ರತಿಯೊಬ್ಬ ಬ್ಯಾಟ್ಸ್‌ಮನ್’ಗಳು ನೆಟ್ಸ್’ನಲ್ಲಿ ಬ್ಯಾಟಿಂಗ್ ಮಾಡುವಾಗ ಥ್ರೋ ಡೌನ್ ಅಭ್ಯಾಸ ಮಾಡುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾದ ರಾಘವೇಂದ್ರ ಬೌನ್ಸರ್, ಶಾರ್ಟ್ ಬಾಲ್ ಎಸೆದು ಟೀಂ ಇಂಡಿಯಾದ ಯಶಸ್ಸಿಗೆ ಕಾರಣನಾಗಿದ್ದಾರೆ.
ಥ್ರೋಡೌನ್ ಎಕ್ಸ್ಪರ್ಟ್ ಆಗಿರುವ ರಾಘವೇಂದ್ರ ಅವರಿಗೆ ಟೀಂ ಇಂಡಿಯಾ ಅಭ್ಯಾಸದ ವೇಳೆ ಹೆಚ್ಚು ಡಿಮ್ಯಾಂಡ್ ಇರುತ್ತದೆ. ಅಂದಹಾಗೆ ರಘು ಅವರು, ಪ್ರತಿಯೊಬ್ಬ ಬ್ಯಾಟ್ಸ್‌ಮನ್’ಗೂ ತಲಾ 300 ಎಸೆತಗಳನ್ನು ಎಸೆಯುತ್ತಾರೆ. ಇವರು ಸೈಡ್ ಆರ್ಮ್ ಎಂಬ ವಿಶೇಷ ಸಾಧನದಿಂದ ಥ್ರೋಡೌನ್ ಪ್ರಾಕ್ಟೀಸ್ ಮಾಡಿಸುವುದರಲ್ಲಿ ನಿಸ್ಸೀಮರು.
ಇದರ ಜೊತೆಗೆ ಬಾನೆತ್ತರಕ್ಕೆ ಬಾಲ್ ಬಾರಿಸಿ ಕ್ಯಾಚಿಂಗ್ ಪ್ರಾಕ್ಟೀಸ್ ಮಾಡಿಸುವುದರಲ್ಲೂ ಎತ್ತಿದ ಕೈ.