“ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನೇ ನೋಡ್ತಾ ಇದ್ರು!”- ಕನ್ನಡದ ಪ್ರಖ್ಯಾತ ನಟಿಯ ಸೆನ್ಸೇಷನಲ್ ಹೇಳಿಕೆ
ಕನ್ನಡ ಪ್ರಖ್ಯಾತ ನಟಿಯರಲ್ಲಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಕಿಚ್ಚ ಸುದೀಪ್ ನಟನೆಯ ‘ವೀರ ಮದಕರಿ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಾಗಿಣಿ, ಆ ಬಳಿಕ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಮಾತ್ರವಲ್ಲದೆ ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿ ಮನ್ನಣೆ ಗಳಿಸಿದ್ದರು. ಆದರೆ ಯಶಸ್ಸಿನ ಹಾದಿಯಲ್ಲೇ ಇದ್ದ ರಾಗಿಣಿ ಒಂದೊಮ್ಮೆ ವಿವಾದದ ಸುಳಿಗೆ ಸಿಲುಕಿಕೊಂಡರು.
ಆ ಘಟನೆಯ ಬಳಿಕ ರಾಗಿಣಿ ಯಶಸ್ಸಿನ ವೇಗಕ್ಕೆ ಕಡಿವಾಣ ಬಿತ್ತು. ಆ ವಿವಾದದ ಬಳಿಕ ರಾಗಿಣಿ ಸಿನಿರಂಗದಲ್ಲಿ ಭವಿಷ್ಯವೇ ಮುಗಿಯಿತು ಎಂದು ಅನೇಕರು ಹೇಳಿದ್ದರು. ಆದರೆ ಆ ಮಾತನ್ನು ರಾಗಿಣಿ ಉಲ್ಟಾ ಮಾಡಿದ್ದರು,
ಸದ್ಯ ರಾಗಿಣಿ ಕೈಯಲ್ಲಿ ಕನ್ನಡ ಸಿನಿಮಾ ಮಾತ್ರವಲ್ಲ, ಪರಭಾಷೆಯ ಸಿನಿಮಾಗಳೂ ಸಹ ಇವೆ. ಈ ಎಲ್ಲದರ ಮಧ್ಯೆ ರಾಗಿಣಿಸಿ, ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್’ಗೆ ನೀಡಿದ ಸಂದರ್ಶನದಲ್ಲಿ ಪ್ರೋಮೋ ಭಾರೀ ವೈರಲ್ ಆಗುತ್ತಿದೆ.
ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಬಗ್ಗೆ ಆಕೆ ನೀಡಿರುವ ಹೇಳಿಕೆ. ಕೆಲವು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಹಾಗೂ ರಾಗಿಣಿ ದ್ವಿವೇದಿಯ ಒಂದು ಫೋಟೊ ವೈರಲ್ ಆಗಿತ್ತು. ಅದರ ಬಗ್ಗೆ ಈಗ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್’ಗೆ ರಾಗಿಣಿ ಸಂದರ್ಶನ ನೀಡಿದ್ದು ಅದರ ಪ್ರೋಮೊ ರಿಲೀಸ್ ಆಗಿದೆ.
ಅದು ಐಪಿಎಲ್ ಸೀಸನ್ 6ರ ಸಂದರ್ಭ…ಆ ವೇಳೆ ರಾಗಿಣಿ ದ್ವಿವೇದಿ ಹಾಗೂ ವಿರಾಟ್ ಕೊಹ್ಲಿಯ ಫೋಟೊ ಒಂದು ವೈರಲ್ ಆಗಿತ್ತು. ಅದರಲ್ಲಿ ವಿರಾಟ್ ಕೊಹ್ಲಿಯ ಹಿಂದೆ ರಾಗಿಣಿ ಶಾರ್ಟ್ ಡ್ರೆಸ್ ತೊಟ್ಟು ನಿಂತಿದ್ದರು. ಆ ವೇಳೆ ರಾಗಿಣಿಯ ಕಾಲುಗಳನ್ನು ವಿರಾಟ್ ಕೊಹ್ಲಿ ನೋಡುತ್ತಿದ್ದರು, ಅದೇ ವೇಳೆಗೆ ಫೋಟೊ ಕ್ಲಿಕ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗಿತ್ತು.
ಇನ್ನು ಈ ಬಗ್ಗೆ ನಿರೂಪಕ ಆರ್ ಜೆ ರಾಜೇಶ್ ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರಾಗಿಣಿಯ ಹೇಳಿಕೆಯನ್ನು ಕಟ್ ಮಾಡಿ ಪ್ರೋಮೊದಲ್ಲಿ ಬಳಸಿದ್ದಾರೆ. "ಅದು ಎರಡು ಮೂರು ನಿಮಿಷ ಅಚಾನಕ್ ನೋಡಿರಬೇಕಷ್ಟೆ. ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನು ನೋಡುತ್ತಿದ್ದರು" ಎಂದು ರಾಗಿಣಿ ಹೇಳಿಕೊಂಡಿದ್ದಾರೆ.