ಶೂಟಿಂಗ್‌ ವೇಳೆ ಕೈ ಮುರಿದುಕೊಂಡ ರಾಗಿಣಿ : ಅಷ್ಟಕ್ಕೂ ಆಗಿದ್ದಾದ್ರೂ ಏನು..!

Fri, 18 Nov 2022-1:07 pm,

ಸ್ಯದ್ಯ ರಾಗಿಣಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಕೈಗೆ ಏಟು ಬಿದ್ದಿದೆ. ವೈದ್ಯರು ನಾಲ್ಕು ದಿನ ಬೆಡ್​ರೆಸ್ಟ್​ ತೆಗೆದುಕೊಳ್ಳಿ ಅಂತ ವೈದ್ಯರು ತಿಳಿಸಿದ್ದಾರೆ.

ʼನಾನು ಒಬ್ಬ ಭಾರತೀಯʼ ಚಿತ್ರದ ಶೂಟಿಂಗ್​ ವೇಳೆ ಈ ಘಟನೆ ನಡೆದಿದೆ. ತಮ್ಮ ಅಭಿಮಾನಿಗಳಿಗೆ ಫೋಟೋ ಹಂಚಿಕೊಂಡು, ಆದಷ್ಟು ಬೇಗ ರಿಕವರ್​ ಆಗುತ್ತೇನೆ ಅಂತ ರಾಗಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಬು ಗಣೇಶ್‌ ನಿರ್ದೇಶನ ʼನಾನು ಒಬ್ಬ ಭಾರತೀಯʼ ಸಿನಿಮಾದಲ್ಲಿ ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಆರ್ಮಿ ಕಮಾಂಡೊ ಆಫೀಸರ್ ಪಾತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ.  

ಇತ್ತೀಚಿಗೆ ನಟಿ ರಾಗಿಣಿ ದ್ವಿವೇದಿ ನಟನೆಯ ʼಬಿಂಗೊʼ ಸಿನಿಮಾದ ಮುಹೂರ್ತ ನೆರವೇರಿತು. ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ವಾಗುತ್ತಿದೆ.  

ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಾಗಿಣಿ ಅವರು ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಅವರ ಬಿಕಿನಿ ಫೋಟೋಗಳು ಸಖತ್ ವೈರಲ್‌ ಆಗಿದ್ದವು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link