Ragini Dwivedi: ಸಿನಿಮಾ ಶೂಟಿಂಗ್ ವೇಳೆ ನಟಿ ರಾಗಿಣಿ ದ್ವಿವೇದಿ ಕಾಲಿಗೆ ಪೆಟ್ಟು, ಬ್ಯಾಂಡೇಜ್‌ ಹಾಕಿರುವ ಫೋಟೋ ವೈರಲ್

Thu, 14 Mar 2024-8:58 am,

ರಾಗಿಣಿ ಸದ್ಯ ‘ಮದನಿಕ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು ಸ್ಟುಡಿಯೋ ಒಂದರಲ್ಲಿ ಈ ಚಿತ್ರ ಶೂಟಿಂಗ್‌ ನಡೆಯುತ್ತಿದೆ. 

‘ಮದನಿಕ’ ಸಿನಿಮಾ ಚಿತ್ರೀಕರಣದ ವೇಳೆ ನಟಿ ರಾಗಿಣಿ ಕಾಲಿಗೆ ಪೆಟ್ಟಾಗಿದೆ. ಇದೀಗ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಟಿ ರಾಗಿಣಿ ತಮ್ಮ ಇನ್‌ ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಕಾಲಿಗೆ ಪೆಟ್ಟಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಲು ನೋವಾದರೂ ರಾಗಿಣಿ ಮುಖದಲ್ಲಿನ ಸ್ಮೈಲ್‌ ಮಾತ್ರ ಹಾಗೇ ಇದೆ. 

ಶೂಟಿಂಗ್‌ ವೇಳೆ ಕಾಲಿಗೆ ಪೆಟ್ಟಾಗಿದ್ದು, ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಕಾಲಿಗೆ ಬ್ಯಾಂಡೇಜ್‌ ಹಾಕಿರುವ ಕಾರಣ ನಟಿ ರಾಗಿಣಿ ಒಂದು ವಾರ ವಿಶ್ರಾಂತಿ ಪಡೆಯಲು ಡಾಕ್ಟರ್‌ ಹೇಳಿದ್ದಾರಂತೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link