ತಂಡದ ಗೆಲುವಿಗಾಗಿ ತಾಯಿಯನ್ನ ಆಸ್ಪತ್ರೆಯಲ್ಲೇ ಬಿಟ್ಟು ಐಪಿಎಲ್ ಆಡಲು ಬಂದ ಸ್ಟಾರ್ ಕ್ರಿಕೆಟಿಗ! ಯಾರವನು ಗೊತ್ತಾ?

Wed, 22 May 2024-4:37 pm,

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪ್ಲೇಆಫ್‌’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಆಡಲೆಂದು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು, ಆಟಗಾರನೋರ್ವ ಐಪಿಎಲ್ ಆಡಲೆಂದು ಬಂದಿದ್ದಾನೆ. ಆ ಆಟಗಾರ ಅಫ್ಘಾನಿಸ್ತಾನದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್. ಈ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. “ಈ ತಂಡವನ್ನು ಕುಟುಂಬವೆಂದು ಪರಿಗಣಿಸಿದ್ದೇನೆ, ಹೀಗಾಗಿ ಈ ಐಪಿಎಲ್ ಆಡಲೆಂದು ಬಂದಿದ್ದೇನೆ” ಎಂದಿದ್ದಾರೆ.

ಈ ಋತುವಿನಲ್ಲಿ ಮೊದಲ ಪಂದ್ಯವನ್ನಾಡಿದ ರಹಮಾನುಲ್ಲಾ ಗುರ್ಬಾಜ್ ಎರಡು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಅದರಲ್ಲಿ 14 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್‌’ನ ಫಿಲ್ ಸಾಲ್ಟ್ ಬದಲಿಗೆ ತಂಡಕ್ಕೆ ಗುರ್ಬಾಜ್ ಆಗಮಿಸಿದ್ದಾರೆ.

ಪಂದ್ಯದ ನಂತರ ರಹಮಾನುಲ್ಲಾ ಗುರ್ಬಾಜ್ ಮಾತನಾಡಿ, 'ಕ್ರಿಕೆಟಿಗನು ತಾನು ಏನು ಮಾಡಬೇಕೆಂದು ಯಾವಾಗಲೂ ತಿಳಿದಿರಬೇಕು. ಕೆಲವೇ ಕೆಲವು ಕ್ರಿಕೆಟಿಗರು ಲೀಗ್ ಕ್ರಿಕೆಟ್‌’ನಲ್ಲಿ ಆಡಲು ಸಾಧ್ಯವಾಗುತ್ತದೆ. ಅವಕಾಶ ಸಿಕ್ಕಾಗ ಅತ್ಯುತ್ತಮ ಪ್ರದರ್ಶನ ನೀಡಬೇಕು. ಅವಕಾಶ ಸಿಗದಿದ್ದರೂ ಸದಾ ಸಿದ್ಧರಾಗಿರಬೇಕು” ಎಂದಿದ್ದಾರೆ.

“ನನ್ನ ತಾಯಿ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಬಳಿಯೇ ಇದ್ದೆ. ಆದೆ ಫಿಲ್ ಸಾಲ್ಟ್ ಮರಳುತ್ತಿದ್ದ ಕಾರಣ ನನಗೆ ಕರೆಬಂತು. ಗುರ್ಬಾಜ್ ನಮಗೆ ನೀವು ಬೇಕು ಎಂದು ಹೇಳಿದರು. ನಾನು ಸರಿ, ಬರುತ್ತೇನೆ ಎಂದು ಹೇಳಿದೆ. ನನ್ನ ತಾಯಿ ಆಸ್ಪತ್ರೆಯಲ್ಲಿದ್ದಾರೆ. ನಾನು ಅವರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೇನೆ. ಇದೂ ಸಹ ನನ್ನ ಕುಟುಂಬ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡಬೇಕು. ಇದನ್ನು ಮಾಡುವುದು ಕಷ್ಟ ಆದರೆ ಅಗತ್ಯ” ಎಂದು ಹೇಳಿದ್ದಾರೆ.

ಪಂದ್ಯದ ಬಗ್ಗೆ ಮಾತನಾಡಿದ ಅವರು, “ಸನ್ ರೈಸರ್ಸ್ ಬ್ಯಾಟಿಂಗ್ ಎಷ್ಟು ಬಲಿಷ್ಠವಾಗಿದೆ ಎಂಬುದು ನಮಗೆ ಗೊತ್ತಿದೆ. ನಾವು ಗುರಿಯನ್ನು ತಿಳಿದಿರಬೇಕು. ಆದ್ದರಿಂದ ಅದಕ್ಕೆ ತಕ್ಕಂತೆ ಆಡಬಹುದು. ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಮತ್ತು ಸನ್‌ರೈಸರ್ಸ್‌ನಂತಹ ತಂಡವನ್ನು 160 ರನ್‌ಗಳಿಗೆ ಸೀಮಿತಗೊಳಿಸುವುದು ದೊಡ್ಡ ವಿಷಯವೇ” ಎಂದು ಹೇಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link