Rahu Budh Yuti: 18ವರ್ಷಗಳ ಬಳಿಕ ರಾಹು ಬುಧ ಯುತಿ, 4 ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ ತಾಯಿ ಮಹಾಲಕ್ಷ್ಮೀ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಚಕ್ರ ಚಿಹ್ನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸಂಧಿಸಿದಾಗ ಗ್ರಹಗಳ ಸಂಯೋಗ ರಚನೆಯಾಗುತ್ತದೆ. ಇದೀಗ ಮೀನ ರಾಶಿಯಲ್ಲಿ ಪಾಪಗ್ರಹ ರಾಹು ಮತ್ತು ಗ್ರಹಗಳ ರಾಜಕುಮಾರ ಬುಧ ಇಬ್ಬರೂ ಒಟ್ಟಿಗೆ ಸೇರಿದ್ದಾರೆ.
ವಾಸ್ತವವಾಗಿ, ಪಾಪ ಗ್ರಹ ರಾಹು ಈಗಾಗಲೇ ಮೀನ ರಾಶಿಯಲ್ಲಿ ಉಪಸ್ಥಿತನಿದ್ದಾನೆ. ಮಾರ್ಚ್ 07ರಂದು ಗ್ರಹಗಳ ರಾಜಕುಮಾರ ಬುಧ ಕೂಡ ಮೀನ ರಾಶಿಗೆ ಪದಾರ್ಪಣೆ ಮಾಡಿದ್ದಾರೆ. ಇದರಿಂದಾಗಿ ಬರೋಬ್ಬರಿ 18 ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು-ಬುಧ ಯುತಿ ನಿರ್ಮಾಣವಾಗಿದೆ.
ರಾಹು-ಬುಧ ಯುತಿಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವಗೆ ಹೆಚ್ಚು ಲಾಭದಾಯಕವಾಗಿದ್ದು, ರಾಹು-ಬುಧರ ಕೃಪೆಯಿಂದಾಗಿ ಸಂಪತ್ತಿನ ಅಧಿದೇವತೆ ತಾಯಿ ಮಹಾಲಕ್ಷ್ಮೀ ಈ ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ....
ರಾಹು-ಬುಧರ ಯುತಿಯು ಕರ್ನಾಟಕ ರಾಶಿಯವರಿಗೆ ಲಾಭದಾಯಕವೆಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ ಉದ್ಯೋಗ ರಂಗದಲ್ಲಿ ಯಶಸ್ಸು, ವ್ಯಾಪಾರದಲ್ಲಿ ಏಳಿಗೆ ಜೊತೆಗೆ ಹಣಕಾಸಿನ ಸ್ಥಿತಿ ಮೊದಲಿಗಿಂತ ಸುಧಾರಿಸಲಿದ್ದು ವೈವಾಹಿಕ ಜೀವನವೂ ಆನಂದದಾಯಕವಾಗಿರಲಿದೆ.
18 ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು-ಬುಧರ ಸಂಯೋಗವು ವೃಶ್ಚಿಕ ರಾಶಿಯವರಿಗೆ ಪ್ರತಿ ಕ್ಷೇತ್ರದಲ್ಲೂ ಅವರ ಕಠಿಣ ಪರಿಶ್ರಮಕ್ಕೆ ಫಲವನ್ನು ನೀಡಲಿದೆ. ಈ ವೇಳೆ ತಾಯಿ ಮಹಾಲಕ್ಷ್ಮಿಯ ಆಶೀರ್ವಾದದಿಂದ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ಬಂಧಗಳು ಗಟ್ಟಿಯಾಗಲಿವೆ.
ರಾಹು-ಬುಧ ಗ್ರಹಗಳ ಸಂಯೋಗವು ಮಕರ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ನೀಡುವ ಸಾಧ್ಯತೆ ಇದ್ದರೆ, ಉದ್ಯಮಿಗಳಿಗೆ ಹೊಸ ವ್ಯವಹಾರವನ್ನು ನಡೆಸಲು ಅನುವು ಮಾಡಿಕೊಡಲಿದೆ. ಆದಾಗ್ಯೂ, ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಸ್ವ ರಾಶಿಯಲ್ಲಿ ಬುಧ-ರಾಹು ಯುತಿಯು ಮೀನ ರಾಶಿಯ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ವ್ಯಾಪಾರಸ್ಥರು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಒಳ್ಳೆಯ ಸಮಯ. ದಾಂಪತ್ಯದಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. ಒಟ್ಟಾರೆಯಾಗಿ ಇದು ನಿಮಗೆ ಬಹಳ ಅದೃಷ್ಟದ ಸಮಯ ಎಂತಲೇ ಹೇಳಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.