Rahu-Budh Yuti 2024: 15 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ರಾಹು-ಬುಧ ಯುತಿ: ಈ ರಾಶಿಯವರಿಗೆ ಭಾಗ್ಯೋದಯ

Wed, 31 Jan 2024-8:18 am,

ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಅದರ ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಇದರೊಂದಿಗೆ ಗ್ರಹಗಳ ಸಂಯೋಗ, ಶುಭ-ಅಶುಭ ಯೋಗಗಳು ಕೂಡ ರೂಪುಗೊಳ್ಳುತ್ತವೆ. 

ರಾಹು-ಬುಧ ಯುತಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ಉಂಟಾಗುತ್ತವೆ. 2024ರ ಮಾರ್ಚ್  7 ರಂದು ರಾಹು ಮತ್ತು ಬುಧ ಮೀನ ರಾಶಿಯಲ್ಲಿ ಸಂಯೋಗಗೊಳ್ಳಲಿದ್ದಾರೆ.    

15 ವರ್ಷಗಳ ಬಳಿಕ ರಾಹು-ಬುಧ ಯುತಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 15 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ರಾಹು ಮತ್ತು ಬುಧ ಸಂಯೋಗ ರೂಪುತೊಳ್ಳುತ್ತಿದೆ.  

ರಾಹು-ಬುಧ ಯುತಿ ಪರಿಣಾಮ:  ಮೀನ ರಾಶಿಯಲ್ಲಿ ರಾಹು-ಬುಧ ಯುತಿಯ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ ಇದರ ಶುಭ ಪರಿಣಾಮಗಳು ಕೆಲವು ರಾಶಿಯವರ ಜೀವನದ ಮೇಲೆ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ. 

ರಾಹು-ಬುಧ  ಯುತಿ ಶುಭ ಪರಿಣಾಮ:  ರಾಹು-ಬುಧ ಸಂಯೋಜನೆಯು ಮೂರು ರಾಶಿಯವರಿಗೆ ಅತ್ಯಂತ ಮಂಗಳಕರವಾಗಿದ್ದು, ಈ ಅವಧಿಯಲ್ಲಿ ಈ ರಾಶಿಯವರ ಅದೃಷ್ಟ ಬೆಳಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ... 

ಮಿಥುನ ರಾಶಿ:  ರಾಹು-ಬುಧರ ಯುತಿಯು ಮಿಥುನ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಈ ರಾಶಿಯ ಜನರು ಉದ್ಯೋಗ ವ್ಯವಹಾರದಲ್ಲಿ ಭಾರೀ ಲಾಭವನ್ನು ಪಡೆಯಲಿದ್ದಾರೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಇದು ಅತ್ಯುತ್ತಮ ಸಮಯವಾಗಿದೆ. 

ಕರ್ಕಾಟಕ ರಾಶಿ: ರಾಹು-ಬುಧರ ಸಂಯೋಗವು ಕರ್ಕ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ಸಮಯದಲ್ಲಿ ನಿಮ್ಮ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ನೀವು ಯಾವುದೇ ಹೊಸ ವ್ಯವಹಾರ ಅಥವಾ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅತ್ಯುತ್ತಮ ಸಮಯ ಇದಾಗಿದೆ.

ಕುಂಭ ರಾಶಿ:  ರಾಹು-ಬುಧ ಯುತಿಯಿಂದಾಗಿ ಕುಂಭ ರಾಶಿಯವರು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾಫ್ರೆ. ಈ ಸಮಯದಲ್ಲಿ ಬಂಪರ್ ಧನಲಾಭದ ನಿರೀಕ್ಷೆಯಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುರಿವಿರಿ. ಇದು ನಿಮಗೆ ಆರ್ಥಿಕವಾಗಿಯೂ ಪ್ರಯೋಜನವನ್ನು ನೀಡಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link