Rahu Gochar: ಮುಂದಿನ ಒಂದೂವರೆ ವರ್ಷಗಳವರೆಗೆ ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ

Thu, 21 Dec 2023-6:35 am,

ರಾಹು ಗೋಚಾರ: ವೈದಿಕ ಜ್ಯೋತಿಷ್ಯದಲ್ಲಿ ಪಾಪ, ಕ್ರೂರ ಗ್ರಹ ಎಂದು ಕರೆಯಲ್ಪಡುವ ರಾಹು ಸದ್ಯ ಮೀನ ರಾಶಿಯಲ್ಲಿದ್ದಾನೆ. 2024ರ ಇಡೀ ವರ್ಷ ಮೀನ ರಾಶಿಯಲ್ಲಿಯೇ ಸಂಚರಿಸಲಿರುವ ರಾಹು, ಕನ್ಯಾ ರಾಶಿಯಲ್ಲಿರುವ ಕೇತುವಿನ ಮೇಲೆ ಸಪ್ತಮ ದೃಷ್ಟಿ ಹರಿಸಲಿದ್ದಾನೆ.

ರಾಹುವಿನ ಪ್ರಭಾವ:  ಮೀನ ರಾಶಿಯಲ್ಲಿ ಸಂಚರಿಸುವ ರಾಹು ಮುಂದಿನ ಒಂದೂವರೆ ವರ್ಷ ಆರು ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರಲಿದ್ದಾನೆ. ಈ ಸಮಯದಲ್ಲಿ ಅವರ ಅದೃಷ್ಟ ಕೈ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ. 

ವೃಷಭ ರಾಶಿ:  ರಾಹುವಿನ ಕೃಪೆಯಿಂದಾಗಿ ವೃಷಭ ರಾಶಿಯವರಿಗೆ 2024ರಲ್ಲಿ ವೃತ್ತಿ ರಂಗದಲ್ಲಿ ಹಲವು ಒಳ್ಳೆಯ ಅವಕಾಶಗಳು ಲಭ್ಯವಾಗಲಿವೆ. ಎಂತಹುದೇ ಸವಾಲುಗಳಿದ್ದರೂ ಅದನ್ನು ಧೈರ್ಯದಿಂದ ನಿಭಾಯಿಸುವ ಶಕ್ತಿ ನಿಮಗಿದ್ದು, ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. 

ಸಿಂಹ ರಾಶಿ:  ರಾಹು ಗೋಚಾರದ ಫಲವಾಗಿ ಸಿಂಹ ರಾಶಿಯಾರಿಗೆ ವೃತ್ತಿ ಜೀವನದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಗಲಿವೆ. ರಾಹು ಆಶೀರ್ವಾದದಿಂದಾಗಿ ಆಸ್ತಿ ಖರೀದಿ ಯೋಗವೂ ಇದೆ. 

ಕನ್ಯಾ ರಾಶಿ:  2024ರಲ್ಲಿ ರಾಹು ಕನ್ಯಾ ರಾಶಿಯವರಿಗೆ ಸುಖ-ಸಂಪತ್ತನ್ನು ಕರುಣಿಸಲಿದ್ದಾನೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ದೀರ್ಘಾವಧಿಯ ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವಿರಿ. 

ತುಲಾ ರಾಶಿ:  ರಾಹು ಆಶೀರ್ವಾದದಿಂದಾಗಿ ಮುಂದಿನ ವರ್ಷ ತುಲಾ ರಾಶಿಯ ವ್ಯಾಪಾರಸ್ಥರು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಇದು ಉತ್ತಮ ಸಮಯ. 

ಮಕರ ರಾಶಿ:  2024ರಲ್ಲಿ ರಾಹು ಮಕರ ರಾಶಿಯವರಿಗೆ ಅವರು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನೀವು ನೆಮ್ಮದಿಂದ ಕೌಟುಂಬಿಕ ಜೀವನವನ್ನು ಅನುಭವಿಸಬಹುದು. 

ಮೀನ ರಾಶಿ:  ರಾಹು ಸಂಚಾರದ ಫಲವಾಗಿ 2024ರಲ್ಲಿ ಮೀನ ರಾಶಿಯವರು ಉತ್ತಮ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರಿಗೆ ನಿಮ್ಮ ಕನಸು ನನಸಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link