Rahu Gochar: ಶನಿಯ ರಾಶಿಯಲ್ಲಿ ರಾಹು, 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಭಾರೀ ಧನಸಂಪತ್ತು ಪ್ರಾಪ್ತಿ

Tue, 18 Jun 2024-6:50 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ ಎಂತಲೇ ಕರೆಯಲ್ಪಡುವ ರಾಹು ಒಂದೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ರಾಹು ಪ್ರಭಾವದಿಂದ ಅತ್ಯಂತ ಶ್ರೀಮಂತ ವ್ಯಕ್ತಿ ದಟ್ಟ ದರಿದ್ರನೂ ಆಗಬಹುದು. ಬಡವ ರಾಜನೂ ಆಗಬಹುದು. 

2023ರಲ್ಲಿ ಮೀನರಾಶಿಗೆ ಪ್ರವೇಶಿಸಿರುವ ರಾಹು2025 ರ ಮೇ 18 ರವರೆಗೆ ಅದೇ ರಾಶಿಯಲ್ಲಿರುತ್ತಾನೆ. ಆದರೆ ಶೀಘ್ರದಲ್ಲೇ ರಾಹು ನಕ್ಷತ್ರ ಪರಿವರ್ತನೆ ಹೊಂದಲಿದ್ದಾನೆ. 

ಸದ್ಯ ರೇವತಿ ನಕ್ಷತ್ರದಲ್ಲಿರುವ ರಾಹು ಜುಲೈ 8 ರಂದು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಉತ್ತರ ಭಾದ್ರಪದ ನಕ್ಷತ್ರಕವನ್ನು ರಾಹುವಿನ ನಕ್ಷತ್ರ ಎಂದು ಹೇಳಲಾಗುತ್ತದೆ. 

ಶನಿ ನಕ್ಷತ್ರದಲ್ಲಿ ರಾಹುವಿನ ಪ್ರವೇಶವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ರಾಹು ನಕ್ಷತ್ರ ಬದಲಾವಣೆಯು ವೃಷಭ ರಾಶಿಯ ಜನರಿಗೆ ಬಂಪರ್ ಧನ-ಲಾಭವನ್ನು ತರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. 

ರಾಹು ನಕ್ಷತ್ರ ಸಂಚಾರವು ತುಲಾ ರಾಶಿಯವರಿಗೆ ಹಣಕಾಸಿನ ಮೂಲಗಳನ್ನು ಹೆಚ್ಚಿಸಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದ ವ್ಯಾಪಾರವನ್ನು ವಿಸ್ತರಿಸಬಹುದು. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. 

ಶನಿಯ ನಕ್ಷತ್ರದಲ್ಲಿ ರಾಹು ಸಂಚಾರವು ವೃಶ್ಚಿಕ ರಾಶಿಯ ಜನರಿಗೆ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ವಿಶೇಷವಾಗಿ ಒಳ್ಳೆಯದು. ಉದ್ಯೋಗಸ್ಥರಿಗೆ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link