Rahu Gochar 2023: ಮೀನ ರಾಶಿಯಲ್ಲಿ ರಾಹು- ಈ ರಾಶಿಯವರಿಗೆ ಬಂಪರ್ ಪ್ರಯೋಜನ

Mon, 12 Jun 2023-9:12 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ 30 ಅಕ್ಟೋಬರ್ 2023 ರಂದು ಪಾಪ ಗ್ರಹ ರಾಹು ಮೀನ ರಾಶಿಗೆ ಪ್ರವೇಶಿಸಳಿದ್ದಾನೆ. ಮೀನಾ ರಾಶಿಯಲ್ಲಿ ರಾಹು ಪದಾರ್ಪಣೆಯು ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವನ್ನು ಐದು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಇವರಿಗೆ ದೊರೆಯಲಿದ್ದು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

2023ರಲ್ಲಿ ರಾಹು ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀದ್ಲೈದೆ. ಈ ಸಮಯದಲ್ಲಿ ದೀರ್ಘ ಸಮಯದ ಹಣಕಾಸು ಸಮಸ್ಯೆಗಳಿಂದ ಮುಕ್ತಿ ದೊರೆಯಲಿದ್ದು ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.   

30 ಅಕ್ಟೋಬರ್ 2023 ರಂದು ಪಾಪ ಗ್ರಹ ರಾಹುವಿನ ರಾಶಿ ಬದಲಾವಣೆಯು ವೃಷಭ ರಾಶಿಯವರಿಗೂ ಲಾಭದಾಯಕವಾಗಿದೆ. ಈ ಸಮಯದಲ್ಲಿ ಪ್ರಯಾಣದ ಸಾಧ್ಯತೆ ಇದ್ದು ಪ್ರಯಾಣವು ಲಾಭದಾಯಕವಾಗಿರುತ್ತದೆ. ವೃತ್ತಿ ರಂಗದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. 

ರಾಹುವಿನ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಮಂಗಳಕರ ಎಂದು ಸಾಬೀತುಪಡಿಸಲಿದೆ. ಉದ್ಯೋಗದಲ್ಲಿ ಯಶಸ್ಸು, ವಿದೇಶ ಪ್ರವಾಸ ಯೋಗವೂ ಇದೆ. ಸಂಪತ್ತು ವೃದ್ಧಿಯಾಗಲಿದೆ. 

2023ರಲ್ಲಿ ರಾಹು ರಾಶಿ ಬದಲಾವಣೆಯು ತುಲಾ ರಾಶಿಯ ಜನರಿಗೆ ಕೂಡ ಬಂಪರ್ ಲಾಭವನ್ನು ನೀಡಲಿದೆ. ಉದ್ಯೋಗದಲ್ಲಿ ಯಶಸ್ಸು, ಧನ ಯೋಗ, ಹೊಸ ಮನೆ-ವಾಹನ ಖರೀದಿ ಯೋಗವೂ ಇದೆ. 

ಮೀನ ರಾಶಿಯಲ್ಲಿಯೇ ರಾಹು ಸಂಚರಿಸುವುದರಿಂದ ಆರ್ಥಿಕವಾಗಿ ತುಂಬಾ ಪ್ರಯೋಜನವಾಗಲಿದೆ. ಇದರಿಂದ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಸಂಪತ್ತು ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link