ಶನಿಯ ರಾಶಿಗೆ ರಾಹು ಪ್ರವೇಶ: 18 ವರ್ಷಗಳ ಬಳಿಕ ಈ ರಾಶಿಯವರಿಗೆ ಮಹರ್ದಶ ಯೋಗ, 2025ರ ವರ್ಷವಿಡೀ ಹಣದ ಸುರಿಮಳೆ
2025ರ ಮೇ 18ರಂದು ಶನಿಯ ಕುಂಭ ರಾಶಿಗೆ ರಾಹು ಪ್ರವೇಶವಾಗಲಿದೆ. ಬರೋಬ್ಬರಿ 18ವರ್ಷಗಳ ಬಳಿಕ ರಾಹು ಕುಂಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪ್ರಭಾದಿಂದ ಮಹರ್ದಶ ಯೋಗ ನಿರ್ಮಾಣವಾಗಲಿದ್ದು ಕೆಲವು ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಭಾಗ್ಯದ ಬಾಗಿಲು ತೆರೆಯುವುದರ ಜೊತೆಗೆ ಬಂಪರ್ ಆದಾಯವೂ ಹರಿದುಬರಲಿದೆ.
ವೃಷಭ ರಾಶಿ: 2025ರಲ್ಲಿ ರಾಹು ಪ್ರಭಾವದಿಂದ ಈ ರಾಶಿಯವರಿಗೆ ವ್ಯಾಪಾರದಲ್ಲಿ ಭಾರೀ ಪ್ರಗತಿ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬದಲ್ಲಿ ಸಂಕಷ್ಟಗಳು ಕಳೆದು ಸುಖಮಯ ಜೀವನ ನಡೆಸುವರು. ಆರೋಗ್ಯದ ದೃಷ್ಟಿಯಿಂದಲೂ ಸಮಯ ಅತ್ಯುತ್ತಮವಾಗಿದೆ.
ಕನ್ಯಾ ರಾಶಿ: ರಾಹು ಗೋಚಾರದಿಂದ 2025ರಲ್ಲಿ ನಿಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯುವಿರಿ. ಬೇರೆಡೆ ಸಿಲುಕಿರಿರುವ ಹಣ ಕೈ ಸೇರಲಿದೆ. ದೊಡ್ಡ ದೊಡ್ಡ ಗುರಿಗಳನ್ನು ಹೊಂದಿಸಿ ಮುಂದುವರೆಯುವುದರಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ.
ಧನು ರಾಶಿ: 2025ರ ವರ್ಷವು ಈ ರಾಶಿಯವರಿಗೆ ವಿವಿಧ ಆಯಾಮಗಳಲ್ಲಿ ಲಾಭದಾಯಕವಾಗಿದೆ. ವೃತ್ತಿಪರರಿಗೆ ಬಡ್ತಿ ಸಂಭವವಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಹಣಕಾಸಿನ ಲಾಭ ದೊರೆಯಲಿದ್ದು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.
ಕುಂಭ ರಾಶಿ: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಭರ್ಜರಿ ಲಾಭ, ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮರೆಯಾಗಿ ಆನಂದಮಯ ಜೀವನ ಅನುಭವಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.