Rahu-Ketu: ಜಾತಕದಲ್ಲಿ ರಾಹು-ಕೇತು ದೋಷಕ್ಕೆ ಇಂದೇ ಈ ಪರಿಹಾರ ಕೈಗೊಳ್ಳಿ

Wed, 06 Dec 2023-6:14 am,

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನೆರಳು ಗ್ರಹಗಳು, ಕ್ರೂರ ಗ್ರಹಗಳು ಎಂತಲೇ ಬಣ್ಣಿಸಲ್ಪಡುವ ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುತ್ತವೆ. ಈ ಗ್ರಹಗಳು 18 ತಿಂಗಳು ಅಥವಾ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. 

ರಾಹು ಗೋಚಾರ: ಇತ್ತೀಚೆಗಷ್ಟೇ 30 ಅಕ್ಟೋಬರ್ 2023 ರಂದು ರಾಹುವು ಮೇಷ ರಾಶಿಯನ್ನು ತೊರೆದು ಮೀನಾ ರಾಶಿಯನ್ನು ಪ್ರವೇಶಿಸಿದ್ದಾನೆ. 

ಕೇತು ಗೋಚಾರ: ಅದೇ ಸಮಯದಲ್ಲಿ ಕೇತು ತುಲಾದಿಂದ ಹೊರಬಂದು ಕನ್ಯಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. 

ರಾಹು-ಕೇತು ಗ್ರಹಗಳ ಸಂಚಾರವು ಇತರ ಗ್ರಹಗಳಂತೆ ಎಲ್ಲಾ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ರಾಹು-ಕೇತು ದೋಷವಿದ್ದಾಗ ಜೀವನವು ಸಮಸ್ಯೆಗಳಿಂದ ಕೂಡಿರುತ್ತದೆ. ಆದರೆ, ನೀವು ಕೆಲವು ಸರಳ ಪರಿಹಾರಗಳ ಮೂಲಕ ರಾಹು-ಕೇತು ದೋಷದಿಂದ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ... 

ಪ್ರತಿ ದಿನ ಕಪ್ಪು ನಾಯಿಗೆ ಆಹಾರವನ್ನು ನೀಡುವುದರಿಂದ ಜಾತಕದಲ್ಲಿ ರಾಹು-ಕೇತು ದೋಷದಿಂದ ಪರಿಹಾರ ಸಿಗಲಿದೆ. 

ಭಾನುವಾರದ ದಿನ ಕನ್ಯೆಯರನ್ನು ಮನೆಗೆ ಕರೆದು ಅವರ ಪಾದ ಪೂಜೆ ಮಾಡಿ, ಹಬ್ಬದ ಅಡಿಗೆ ಮಾಡಿ ಬಾಳೆ ಎಲೆಯಲ್ಲಿ ಊಟಕ್ಕೆ ಹಾಕಿ. ಇದರಿಂದ ಜಾತಕದಲ್ಲಿ ರಾಹು-ಕೇತು ಗ್ರಹಗಳ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. 

ಶೇಷನಾಗನ ಮೇಲೆ ನರ್ತಿಸುವ ಶ್ರೀ ಕೃಷ್ಣನ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ರಾಹು-ಕೇತುಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲ್ಲಾಗುತ್ತದೆ. 

9 ಮುಖಿ ರುದ್ರಾಕ್ಷಿ: 

ಬುಧವಾರದ ದಿನ   9 ಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದಲೂ ಕೇತು ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ಹೋಗಲಾಡಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link