Rahu Gochar 2022: ಇಂದಿನಿಂದ ಹೊಳೆಯಲಿದೆ ಈ 5 ರಾಶಿಗಳ ಅದೃಷ್ಟ!

Tue, 12 Apr 2022-1:12 pm,

ರಾಹು ಕೇತುಗಳ ಸಂಚಾರವು ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಸಂಬಳ ಹೆಚ್ಚಾಗಬಹುದು. ಹಣದ ಮೂಲಗಳು ಹೆಚ್ಚಾಗುತ್ತವೆ. ಹಣ ಉಳಿತಾಯದಲ್ಲೂ ಯಶಸ್ವಿಯಾಗುತ್ತೀರಿ. ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಉತ್ತಮ.

ಕರ್ಕಾಟಕ ರಾಶಿಯ ಜನರಿಗೆ, ರಾಹು-ಕೇತು ಗ್ರಹಗಳ ಈ ಸಂಚಾರವು ವೃತ್ತಿ ಮತ್ತು ವ್ಯಾಪಾರ ಎರಡಕ್ಕೂ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಉದ್ಯೋಗಾಕಾಂಕ್ಷಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಾಗಬಹುದು. ಬಡ್ತಿಯನ್ನು ಪಡೆಯುವ ಬಲವಾದ ಅವಕಾಶಗಳಿವೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. 

ಈ ಸಮಯವು ತುಲಾ ರಾಶಿಯವರಿಗೆ ಸಂತೋಷ, ಸಮೃದ್ಧಿ ಮತ್ತು ಗೌರವವನ್ನು ತರುತ್ತದೆ. ಈ ರಾಶಿಯವರು ಕೈ ಹಾಕಿದ ಎಲ್ಲಾ ಕೆಲಸಗಳಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಸಾಕಷ್ಟು ಹಣ ಗಳಿಸುವರು. ಹಣ ಸಂಪಾದಿಸಲು ನೀವು ಹೊಸ ಮಾರ್ಗಗಳನ್ನು ಪ್ರಯತ್ನಿಸಬಹುದು. ನಿಮ್ಮ ಗುರಿಯತ್ತ ನೀವು ಗಮನಹರಿಸಿದರೆ ಯಶಸ್ಸು ಖಂಡಿತ. 

ರಾಹು-ಕೇತು ಗ್ರಹಗಳ ಈ ಸಂಕ್ರಮವು ಧನು ರಾಶಿಯವರಿಗೆ ಉತ್ತಮ ವಿತ್ತೀಯ ಲಾಭವನ್ನು ನೀಡುತ್ತದೆ. ಅವರು ಬಹಳಷ್ಟು ಗಳಿಸುತ್ತಾರೆ, ಆದಾಗ್ಯೂ  ವೆಚ್ಚವೂ ಹೆಚ್ಚಾಗುತ್ತವೆ. ಬಡ್ತಿ-ಹೆಚ್ಚಳ ಪಡೆಯುವ ಸಾಧ್ಯತೆಗಳಿವೆ. ಜೀವನದಲ್ಲಿ ಸಂತೋಷವು ಹೆಚ್ಚಾಗುತ್ತದೆ.

ಮಕರ ರಾಶಿಯವರಿಗೆ ರಾಹು-ಕೇತುಗಳ ಸಂಚಾರವೂ ಶುಭಕರವಾಗಿರುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ. ತಾಯಿಯಿಂದ ಹಣ ಗಳಿಸಬಹುದು. ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳಿವೆ. ಉದ್ಯೋಗ ಅಥವಾ ವಾಸಸ್ಥಳದಲ್ಲಿ ಬದಲಾವಣೆಯಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link