Be Alert! ರಂಗ ಪಂಚಮಿಯ ದಿನ 4 ರಾಶಿಗಳ ಸಂಕಷ್ಟ ಹೆಚ್ಚಿಸಲಿದ್ದಾರೆ ರಾಹು-ಕೇತು-ಮಂಗಳ!
ಮೇಷ ರಾಶಿ: ರಂಗು ಪಂಚಮಿಯಂದು ಮೇಷ ಜಾತಕದವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮ್ಮ ರಾಶಿಯಲ್ಲಿ ರಾಹು ವಿರಾಜಮಾನನಾಗಿದ್ದಾನೆ. ಒತ್ತಡ ಅಥವಾ ಚಿಂತೆ ನಿಮ್ಮನ್ನು ಆವರಿಸುವ ಸಾಧ್ಯತೆ ಇದೆ. ರಾಹುವನ್ನು ದುರ್ಘಟನೆಯ ಕಾರಕ ಎಂದೂ ಕೂಡ ಭಾವಿಸಲಾಗುತ್ತದೆ. ಹೀಗಾಗಿ ಮೇಷ ಜಾತಕದವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಲಿದೆ. ವಾಹನವನ್ನು ಬೇರೊಬ್ಬರಿಂದ ಎರವಲು ಪಡೆದು ಚಲಾಯಿಸಬೇಡಿ. ವಿನಾಕಾರಣ ವಾಗ್ವಾದ ಅಥವಾ ವ್ಯಾಜ್ಯದಲ್ಲಿ ತೊಡಗಿಸಿಕೊಳ್ಳಬೇಡಿ. ದೇವಾಧಿದೇವ ಮಹಾದೇವನ ಆರಾಧನೆ ಮಾಡಿ ಮತ್ತು ಶಿವ ಚಾಲಿಸಾ ಪಠಿಸಿ. ರಂಗ ಪಂಚಮಿಯ ದಿನ ಮೇಷ ರಾಶಿಯ ಜಾತಕದವರು ಅಭಿರ ಗುಲಾಲ ಅನ್ನು ಬಳಸುವುದು ಉಚಿತ. ನೀವು ಕಿತ್ತಳೆ ಅಥವಾ ಗುಲಾಭಿ ಬಣ್ಣದ ಹೋಳಿ ಕೂಡ ಆಡಬಹುದು.
ವೃಷಭ ರಾಶಿ: ವೃಷಭ ರಾಶಿಯ ಜಾತಕದವರಿಗೆ ಮಂಗಳ ದುಬಾರಿ ಪರಿಣಮಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಸೇನಾಪತಿ ಹಾಗೂ ಓರ್ವ ಆಕ್ರಮಣಕಾರಿ ಗ್ರಹ ಎಂದು ಭಾವಿಸಲಾಗುತ್ತದೆ. ಈ ಗ್ರಹವನ್ನು ಯುದ್ಧ, ವಾದ-ವಿವಾದ, ವ್ಯಾಜ್ಯ-ಜಗಳದ ಕಾರಕ ಗ್ರಹವೆಂದು ಭಾವಿಸಲಾಗಿದೆ. ಹೀಗಾಗಿ ರಂಗಪಂಚಮಿಯ ದಿನ ಇವೆಲ್ಲವೂಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಈ ರೀತಿ ಮಾಡದೆ ಹೋದಲ್ಲಿ ಅದು ನಿಮಗೆ ಹಾನಿಕಾರಕ ಸಾಬೀತಾಗುವ ಸಾಧ್ಯತೆ ಇದೆ. ನೀವು ಶ್ರೀ ಆಂಜನೇಯನ ಆರಾಧನೆ ಮಾಡಿದರೆ ಉತ್ತಮ. ರಂಗಪಂಚಮಿಯ ದಿನ ವೃಷಭ ರಾಶಿಯ ಜಾತಕದವರು ಗುಲಾಬಿ ಬಣ್ಣ ಅಥವಾ ಬಿಳಿ ಬಣ್ಣ ಬಳಸುವುದು ಸೂಕ್ತ.
ತುಲಾ ರಾಶಿ: ತುಲಾ ರಾಶಿಗಳ ಜಾತಕದವರ ಮೇಲೆ ಕೇತುವಿನ ಪ್ರಭಾವ ಇರಲಿದೆ. ಕೇತು ಪರಸ್ಪರರ ಸಂಬಂಧ ಹಾಳುಮಾಡುವುದರಲ್ಲಿ ನಿಸ್ಸಿಮ. ಹೀಗಾಗಿ ಸಂಬಂಧಗಳ ಬಗ್ಗೆ ಎಚ್ಚರಿಕೆವಹಿಸಿ, ಬಂಧು-ಮಿತ್ರರ ಮಧ್ಯೆ ಮತಭೆದಕ್ಕೆ ಇದು ಕಾರಣವಾಗಬಹುದು. ಅಹಂಕಾರದ ಕಾರಣ ನಿಮ್ಮ ಸಾಮಾಜಿಕ ಪ್ರತಿಷ್ಠೆ ಮಣ್ಣಾಗಬಹುದು. ಶ್ರೀಗಣೇಶನ ಪೂಜೆ ಮಾಡುವುದು ನಿಮಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಬಿಳಿ ಅಥವಾ ಹೊಳಪುಳ್ಳ ಬಣ್ಣದೊಕುಳಿ ಆಡುವುದು ಉತ್ತಮ.
ಕುಂಭ ರಾಶಿ: ರಂಗಪಂಚಮಿಯ ದಿನ ಕುಂಭ ರಾಶಿಯ ಜನರು ಸ್ವಲ್ಪ ಎಚ್ಚರಿಕೆವಹಿಸಬೇಕು. ಈ ರಾಶಿಯಲ್ಲಿ ಶನಿಯ ಜೊತೆಗೆ ಬುಧ-ಸೂರ್ಯರ ಯುತಿ ನೆರವೇರಲಿದೆ. ಹಾಗೆ ನೋಡಿದರೆ ಕುಂಭ ರಾಶಿಗೆ ಶನಿ ಅಧಿಪತಿ. ಆದರೂ ಕೂಡ ನೀವು ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಬಹುದು. ಹೃದಯಕ್ಕೆ ಸಂಬಂಧಿಸಿದ ಯಾವುದೇ ಒಂದು ಸಮಸ್ಯೆಯಿಂದ ನೇವು ಬಳಲುತ್ತಿದ್ದರೆ, ಸ್ವಲ್ಪವೂ ನಿರ್ಲಕ್ಷ ತೋರಬೇಡಿ. ಶಾರೀರಿಕ ಸಮಸ್ಯೆಗಳು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಲಿವೆ. ತಾಯಿ ದುರ್ಗೆಯ ಪೂಜೆ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ನೀಲಿ ಬಣ್ಣ ಅಥವಾ ಬದನೆ ಬಣ್ಣದ ಹೋಳಿ ನಿಮ್ಮ ಪಾಲಿಗೆ ಉತ್ತಮ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)