Shani Vakri: 4 ದಿನಗಳ ನಂತರ ರಾಹು-ಕೇತು-ಶನಿ ಹಿಮ್ಮುಖ ಚಲನೆ, ಈ ರಾಶಿಯವರಿಗೆ ಕಾದಿದೆ ಆಪತ್ತು !
ಶನಿ ವಕ್ರಿ: ಮುಂದಿನ 6 ತಿಂಗಳಲ್ಲಿ 3 ಗ್ರಹಗಳ ಹಿಮ್ಮುಖ ಚಲನೆ ಸಂಭವಿಸಲಿದೆ. ಇದರ ಪರಿಣಾಮವು ಈ 4 ರಾಶಿಗಳ ಮೇಲೆ ಕಂಡುಬರುತ್ತದೆ. ಈ ಜನರು ಆರೋಗ್ಯ, ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು.
ಕಟಕ ರಾಶಿ: ಶನಿಯೊಂದಿಗೆ ರಾಹು-ಕೇತುಗಳ ಹಿಮ್ಮುಖ ಚಲನೆಯಿಂದಾಗಿ, ಕಟಕ ರಾಶಿಯವರು ಮುಂದಿನ 6 ತಿಂಗಳವರೆಗೆ ತಮ್ಮ ವೃತ್ತಿಜೀವನದ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ರಾಶಿಯವರಿಗೆ ಹಣಕಾಸಿನ ವಿಷಯಗಳಲ್ಲಿ ಸಹ ತೊಂದರೆಯಾಗುವ ಸಾಧ್ಯತೆಯಿದೆ. ಸಾಲ ಪಡೆದ ಜನರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಜೀವನದಲ್ಲಿ ಗೊಂದಲ ಹೆಚ್ಚಾಗಲಿದೆ. ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ.
ಸಿಂಹ ರಾಶಿ: ಈ 3 ಗ್ರಹಗಳ ಹಿಮ್ಮುಖ ಚಲನೆಯು ಸಿಂಹ ರಾಶಿಯವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರಮಕ್ಕೆ ತಕ್ಕ ಫಲಿತಾಂಶ ಸಿಗದ ಕಾರಣ ನಿರಾಸೆ ನಿಮ್ಮನ್ನು ಕಾಡಲಿದೆ. ಹೊಸ ಉದ್ಯೋಗಕ್ಕಾಗಿ ಹುಡುಕುವ ಬಗ್ಗೆ ಗೊಂದಲ ಕಾಡಬಹುದು. ಈ ಸಮಯದಲ್ಲಿ ಏನೇ ಮಾಡಿದರೂ ನಿಮಗೆ ಮಾನಸಿಕ ಶಾಂತಿ ಸಿಗುವುದಿಲ್ಲ. ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಯೋಚಿಸಿ. ಯಾವುದೇ ಕಾನೂನು ವಿಷಯದಲ್ಲಿ ಜಾಗರೂಕರಾಗಿರಿ.
ವೃಶ್ಚಿಕ ರಾಶಿ: ಮುಂಬರುವ 6 ತಿಂಗಳು ಈ ರಾಶಿಯವರಿಗೆ ತುಂಬಾ ಕಷ್ಟವಾಗಲಿದೆ. ಶನಿ, ರಾಹು ಮತ್ತು ಕೇತುಗಳು ಕೌಟುಂಬಿಕ ವಿಷಯಗಳಲ್ಲಿ ಜಾಗರೂಕರಾಗಿರಿ. ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಸಮಸ್ಯೆಗಲು ಉಂಟಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ವ್ಯಾಪಾರಸ್ಥರು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಜನರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಈ ಸಮಯದಲ್ಲಿ ಪೇಪರ್ಸ್ ಇಲ್ಲದೆ ಹಣಕಾಸಿನ ವ್ಯವಹಾರಗಳನ್ನು ಮಾಡಬೇಡಿ.
ಮೀನ ರಾಶಿ: ಪ್ರಸ್ತುತ ಸಾಡೇ ಸತಿಯ ಮೊದಲ ಹಂತದಲ್ಲಿ ಈ ರಾಶಿಯವರಿದ್ದಾರೆ. ಅದರ ಜೊತೆ 3 ಗ್ರಹಗಳ ಹಿಮ್ಮುಖ ಸಂಚಾರ ನಿಮ್ಮ ಮಾನಸಿಕ, ಆರ್ಥಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಮನಸ್ಸಿನಲ್ಲಿ ಏನೋ ಗೊಂದಲವಿರಬಹುದು. ಸಂಗಾತಿಯೊಂದಿಗಿನ ವಾದಗಳು ಮತ್ತು ಸಮನ್ವಯದ ಕೊರತೆಯಿಂದಾಗಿ ಮನೆಯ ವಾತಾವರಣ ಹಾಳಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ.