ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು! ಜೀವನ ಬೆಳಗಿಸಲಿದ್ದಾರೆ ರಾಹು -ಕೇತು

Tue, 22 Aug 2023-12:55 pm,

ರಾಹು ಕೇತು ಸಂಕ್ರಮಣ: ಈ ವರ್ಷ ಅಕ್ಟೋಬರ್ 30, 2023 ರಂದು ರಾಹು-ಕೇತು ತಮ್ಮ ರಾಶಿಯನ್ನು ಬದಲಾಯಿಸಲಿದ್ದಾರೆ. ಅಕ್ಟೋಬರ್ 30 ರಂದು ರಾಹು ಮೀನ ರಾಶಿಗೆ ಮತ್ತು ಕೇತು ಕನ್ಯಾರಾಶಿಗೆ ತೆರಳುತ್ತಾರೆ. 

ಗ್ರಹಗಳ ಮೇಲೆ ಪರಿಣಾಮ: ರಾಹು-ಕೇತುಗಳು ಕೇವಲ ಅಶುಭ ಫಲವನ್ನೇ ನೀಡುವುದಿಲ್ಲ. ರಾಹು ಮತ್ತು ಕೇತುಗಳ ಸಂಚಾರವು ಕೆಲವು ರಾಶಿಯವರ ಜೀವನದಲ್ಲಿ ಮಂಗಳಕರ ಫಲ ನೀಡುತ್ತದೆ. 

ಮೇಷ: ವ್ಯಾಪಾರಕ್ಕೆ ಇದು ಉತ್ತಮ ಸಮಯವಾಗಿರುತ್ತದೆ. ನಿಮ್ಮ ಉದ್ಯೋಗ ಅಥವಾ ಸ್ಥಳದಲ್ಲಿ ಬದಲಾವಣೆಯಾಗಬಹುದು. ಕೆಲವೊಮ್ಮೆ ನೀವು ಒತ್ತಡವನ್ನು ಎದುರಿಸಬೇಕಾಗುತ್ತದೆ.

ವೃಷಭ: ಕೋಪ ಮತ್ತು ಅಹಂಕಾರ ಯಾವುದೇ ಕಾರಣಕ್ಕೂ ಬೇಡ. ವ್ಯಾಪಾರ ಚೆನ್ನಾಗಿರಲಿದೆ. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ.

ಮಿಥುನ: ಜೀವನವನ್ನು ಸಂತೋಷದಿಂದ ಕಳೆಯುತ್ತೀರಿ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. 

ಕರ್ಕಾಟಕ: ಜೀವನದಲ್ಲಿ ಹಲವು ಸಮಸ್ಯೆಗಳಿಂದ ಮುಕ್ತಿ ಹೊಂದಿ ನೆಮ್ಮದಿಯ ಬದುಕು ನಿಮ್ಮದಾಗುವುದು. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಕಲೆ ಮತ್ತು ಸಂಗೀತದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. 

ಸಿಂಹ:  ಭೌತಿಕ ಆನಂದ ಹೆಚ್ಚಾಗುತ್ತದೆ. ಅನಿರೀಕ್ಷಿತ ಸ್ಥಳಗಳಿಂದ ಹಣ ಬರುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವಿರಿ. 

ಕನ್ಯಾ: ಸಂಪೂರ್ಣ ಆತ್ಮವಿಶ್ವಾಸದಿಂದ ಇರುತ್ತೀರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ನೀವು ಕೆಲಸದಲ್ಲಿ ಸಕ್ರಿಯರಾಗಿರುತ್ತೀರಿ. ಹಣದ ಹರಿವು ಹೆಚ್ಚಾಗುತ್ತದೆ.   

ತುಲಾ: ನಿಮ್ಮ ಮನದ ಇಚ್ಛೆ ಈಡೇರಲಿದೆ. ವೃತ್ತಿಬದುಕು -ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 

ವೃಶ್ಚಿಕ: ಜೀವನದಲ್ಲಿ ಏರಿಳಿತಗಳಿರುತ್ತವೆ. ತಾಳ್ಮೆಯಿಂದ ಕೆಲಸ ಮಾಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಸೂಕ್ತ. ಕೋಪ ಮತ್ತು ವಿವಾದವನ್ನು ತಪ್ಪಿಸಿ. ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.   

ಧನು ರಾಶಿ : ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಲಾಭ ಸಿಗುತ್ತದೆ. ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮದಿಂದ ಜೇಬು ತುಂಬುವುದು.  

ಮಕರ: ಎಲ್ಲ ಕೆಲಸಗಳನ್ನು ಆತ್ಮವಿಶ್ವಾಸದಿಂದ ಪೂರ್ಣಗೊಳಿಸುವಿರಿ. ಆದರೆ ಶಾಂತವಾಗಿರಲು ಪ್ರಯತ್ನಿಸಿ. ತಂದೆಯ ಆರೋಗ್ಯದ ಕಡೆ ವಿಶೇಷ ಗಮನವಿರಲಿ.    

ಕುಂಭ:  ಅನಗತ್ಯ ಕೋಪ ಮತ್ತು ಜಗಳಗಳನ್ನು ತಪ್ಪಿಸಿ. ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. 

ಮೀನ:  ವ್ಯವಹಾರದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ಆತ್ಮ ವಿಶ್ವಾಸದ ಬಲದಿಂದ ನೀವು  ಜಯ ಗಳಿಸುವಿರಿ. ನಿಮ್ಮ ಕೆಲಸಕ್ಕೆ ತಾಯಿಯ ಬೆಂಬಲ ಸಿಗುವುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link