Rahu-Ketu Transit: ಒಂದೂವರೆ ವರ್ಷಗಳ ಬಳಿಕ ಈ 5 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದಾರೆ ರಾಹು-ಕೇತು

Wed, 04 Oct 2023-5:00 pm,

ಜ್ಯೋತಿಷ್ಯ ಶಾಸ್ತ್ರದಲ್ಲಿ ನೆರಳು ಗ್ರಹಗಳು, ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳು ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ.  ದೀಪಾವಳಿ ಹಬ್ಬಕ್ಕೂ ಮೊದಲು ಎಂದರೆ ಅಕ್ಟೋಬರ್ 30, 2023ರಂದು ರಾಹು ಗ್ರಹ ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ. ಇದರೊಂದಿಗೆ ಐದು ರಾಶಿಯ ಜನರ ಜೀವನದಲ್ಲಿ ಭಾಗ್ಯದ ಬಾಗಿಲುಗಳನ್ನು ತೆರೆಯಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಅಕ್ಟೋಬರ್ ಅಂತ್ಯದಲ್ಲಿ ಮೇಷ ರಾಶಿಯನ್ನು ತೊರೆದು ಮೀನ ರಾಶಿಗೆ ಪ್ರವೇಶಿಸಲಿರುವ ರಾಹು  ಗುರು-ಚಂಡಾಲ ಯೋಗವನ್ನು ನಿರ್ಮಿಸಲಿದ್ದಾನೆ. ರಾಹು ರಾಶಿ ಪರಿವರ್ತನೆಯೊಂದಿಗೆ ಮೇಷ ರಾಶಿಯಲ್ಲಿ ಐದು ಮಂಗಳಕರ ಯೋಗಗಳು ರೂಪುಗೊಳ್ಳಲಿದ್ದು, ಈ ಸಮಯದಲ್ಲಿ ಮೇಷ ರಾಶಿಯ ಜನರು ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು, ಕೀರ್ತಿಯನ್ನು ಗಳಿಸಲಿದ್ದಾರೆ. ಇದರಿಂದ ಬಂಪರ್ ಹಣಕಾಸಿನ ಲಾಭ ಸಾಧ್ಯತೆಯೂ ಇದೆ. 

ಒಂದೂವರೆ ವರ್ಷಗಳ ಬಳಿಕ ರಾಹು-ಕೇತು ಗ್ರಹಗಳ ರಾಶಿ ಬದಲಾವನೆಯು ಕರ್ಕಾಟಕ ರಾಶಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ  ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುವಿರಿ.  ಉದ್ಯೋಗಸ್ಥರಿಗೆ ಬಡ್ತಿ, ವ್ಯಾಪಾರಸ್ಥರಿಗೆ ಬಂಪರ್ ಹಣಕಾಸಿನ ಪ್ರಯೋಜನವಾಗಲಿದೆ. ಇದರಿಂದಾಗಿ ನಿಮ್ಮ ಇಷ್ಟು ದಿನಗಳ ಹಣಕಾಸಿನ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. 

ರಾಹು ಕೇತು ಗ್ರಹಗಳ ಸಂಚಾರದಲ್ಲಿನ ಬದಲಾವಣೆಯು ಸಿಂಹ ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಕೂಡ ಬಹಳ ಸುಲಭವಾಗಿ ಪೂರ್ಣಗೊಳಿಸುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ನಿಮ್ಮ ಹಲವು ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. 

ಪಾಪ ಗ್ರಹಗಳಾದ ರಾಹು-ಕೇತು ಸಂಚಾರವು ತುಲಾ ರಾಶಿಯವರ ಜೀವನದಲ್ಲಿ ಸಂತೋಷದ ಹೊನಲನ್ನು ಹರಿಸಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಆಕಸ್ಮಿಕ ಹಣಕಾಸಿನ ಲಾಭವು ನಿಮ್ಮ ತಿಜೋರಿಯನ್ನು ತುಂಬಲಿದೆ. ಪತಿ-ಪತ್ನಿಯರ ಸಂಬಂಧದಲ್ಲಿ ಮಧುರತೆ ಇರಲಿದೆ. 

ರಾಹು-ಕೇತು ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಏಳ್ಗೆ ಕಾಣುವಿರಿ. ವ್ಯಾಪಾರ-ವ್ಯವಹಾರದಲ್ಲಿ ಹಣಕಾಸಿನ ಲಾಭವಾಗಲಿದೆ. ಒಟ್ಟಾರೆಯಾಗಿ ಇದು ನಿಮಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link